ಮೇ 12ರಿಂದ ಪ್ರಯಾಣಿಕ ರೈಲು ಸೇವೆ ಆರಂಭ: ಪ್ರಯಾಣಿಕರು ತಿಳಿದಿರಲೇಬೇಕಾದ ಅಂಶಗಳು…

Update: 2020-05-10 18:26 GMT

ಹೊಸದಿಲ್ಲಿ: ದೇಶದ ವಿವಿಧೆಡೆ ಲಾಕ್ ಡೌನ್ ನಿರ್ಬಂಧಗಳು ಸಡಿಲಗೊಳ್ಳುತ್ತಿರುವ ನಡುವೆ ಪ್ರಯಾಣಿಕ ರೈಲು ಸೇವೆಯನ್ನು ಮಂಗಳವಾರ ಆರಂಭಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.

►ಈ ಹಿನ್ನೆಲೆಯಲ್ಲಿ ಸಚಿವಾಲಯ ಪ್ರಯಾಣಿಕರಿಗೆ ನೀಡಿದ ಪ್ರಮುಖ ಸೂಚನೆಗಳಿವು…

►30 ಮಾರ್ಗಗಳಲ್ಲಿ ರೈಲು ಸಂಚಾರಗೊಳ್ಳಲಿದೆ.

►ದಿಬ್ರುಗರ್, ಅಗರ್ತಲ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್, ಅಹ್ಮದಾಬಾದ್ ಮತ್ತು ಜಮ್ಮು ಕಾವಿ ರೈಲ್ವೆ ನಿಲ್ದಾಣದಿಂದ ಈ ರೈಲುಗಳು ಹೊಸದಿಲ್ಲಿಯನ್ನು ಸಂಪರ್ಕಿಸಲಿದೆ.

►ಮೇ 11ರ ಮಂಗಳವಾರ ಸಂಜೆ 4 ಗಂಟೆಗೆ ಈ ರೈಲುಗಳ ಬುಕ್ಕಿಂಗ್ ಮತ್ತು ರಿಸರ್ವೇಶನ್ ಆರಂಭಗೊಳ್ಳಲಿದೆ. ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ ನೋಂದಾಯಿಸಿಕೊಳ್ಳಬೇಕು. ರೈಲ್ವೆ ನಿಲ್ದಾಣಗಳಲ್ಲಿ ಯಾವುದೇ ಬುಕ್ಕಿಂಗ್ ಇರುವುದಿಲ್ಲ. ಪ್ಲಾಟ್ ಫಾರಂ ಟಿಕೆಟ್ ಕೂಡ ನೀಡುವುದಿಲ್ಲ.

►ದೃಢೀಕೃತ ಟಿಕೆಟ್ ಇರುವ ಪ್ರಯಾಣಿಕರಿಗೆ ಮಾತ್ರ ರೈಲ್ವೆ ನಿಲ್ದಾಣ ಪ್ರವೇಶಕ್ಕೆ ಅವಕಾಶ. ಎಲ್ಲಾ ಪ್ರಯಾಣಿಕರು ಮಾಸ್ಕ್ ಅಥವಾ ಮುಖ ಮುಚ್ಚುವ ವಸ್ತ್ರ ಧರಿಸಬೇಕು.

►ನಿರ್ಗಮನದಲ್ಲಿ ಪ್ರಯಾಣಿಕರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗುವುದು. ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ಅವಕಾಶ,

►ಈ 15 ವಿಶೇಷ ರೈಲುಗಳು ಹವಾನಿಯಂತ್ರಿತವಾಗಿರಲಿದೆ.

►ರಾಜಧಾನಿ ಎಕ್ಸ್ ಪ್ರೆಸ್ ದರದಷ್ಟೇ ಈ ರೈಲುಗಳ ದರವೂ ಇರಲಿದೆ.

►ಎಲ್ಲಾ ಸ್ಟೇಶನ್ ಗಳಲ್ಲಿ ಸುರಕ್ಷಿತ ಅಂತರ ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು

►ಪ್ರಯಾಣದ ವಿವರ, ಸಮಯದ ಬಗ್ಗೆ ಶೀಘ್ರ ಘೋಷಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News