ಮಂಗಳೂರು-ಉಡುಪಿ ನಡುವಿನ ಸಂಚಾರ ನಿರ್ಬಂಧ ತೆರವು
Update: 2020-05-11 18:34 IST
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ನಡುವೆ ಸಂಚಾರಕ್ಕೆ ಅಂತರ್ ಜಿಲ್ಲಾ ಪಾಸ್ ಇಲ್ಲದೆ ಆಯಾ ಸಂಸ್ಥೆಯ ಗುರುತು ಪತ್ರದೊಂದಿಗೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಸಂಚರಿಸಬಹುದು ಎಂದು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶ ನೀಡಿದ್ದಾರೆ.
ಕೊರೋನ ಸೊಂಕು ತಡೆಯ ಹಿನ್ನೆಲೆಯ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಬಂಧಿಸಿದ ಜಿಲ್ಲೆಗಳನ್ನು ಒಂದು ಯೂನಿಟ್ ಆಗಿ ಪರಿಗಣಿಸಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಜನರ ದಿನನತ್ಯದ ಖಾಸಗಿ ವಾಹನಗಳ ಸಂಚಾರಕ್ಕೆ ಒಂದು ಘಟಕವಾಗಿ ಪರಿಗಣಿಸಿ ಆದೇಶ ಮಾಡಿರುತ್ತಾರೆ.