×
Ad

ಅಲ್ ಬಿರ್ರ್ ಅಂತರ್ ರಾಜ್ಯ ಖಿರಾಅತ್ ಸ್ಪರ್ಧೆ: ದ.ಕ. ಜಿಲ್ಲೆಯ ಫಾತಿಮತ್ ಝಹ್ರಾ ಪ್ರಥಮ

Update: 2020-05-11 20:17 IST

ಮಂಗಳೂರು : ರಮಝಾನ್ ಪ್ರಯುಕ್ತ ಅಲ್ ಬಿರ್ರ್ ಪ್ರಿ ಸ್ಕೂಲ್ ವತಿಯಿಂದ ನಡೆದ ಅಂತರ್ ರಾಜ್ಯ ಕುರ್ ಆನ್ ಪಾರಾಯಣ ಸ್ಪರ್ಧೆಯಲ್ಲಿ ಜಿಲ್ಲೆಯ ಮೂಡುಬಿದಿರೆ ಅಬ್ದುಲ್ ಜಬ್ಬಾರ್ ಉಸ್ತಾದ್ ಮೆಮೋರಿಯಲ್ ಅಲ್ ಬಿರ್ರ್ ಸ್ಕೂಲ್ ನ ವಿದ್ಯಾರ್ಥಿನಿ ಫಾತಿಮತ್ ಝಹ್ರಾ ಪ್ರಥಮ ಸ್ಥಾನ ಪಡೆದಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಸಹ್ರತುಲ್ ಉಲೂಂ ಅಲ್ ಬಿರ್ರ್ ಸ್ಕೂಲ್ ವಿದ್ಯಾರ್ಥಿ ಹಾಫಿಝಾ ಸಲ್ವಾ ದ್ವಿತಿಯ ಸ್ಥಾನ ಪಡೆದರೆ, ಮಲಪ್ಪುರಂ ಜಿಲ್ಲೆಯ ದಾವತ್ ಅಲ್ ಬಿರ್ರ್ ವಿದ್ಯಾರ್ಥಿ ಶೈಬಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅಂತರ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ  ಸೇರಿದಂತೆ ಒಮಾನ್ ದೇಶದ ಸಲಾಲ ಹಾಗೂ ಕೇರಳ ರಾಜ್ಯ ಶಾಲೆಗಳು ಪಾಲ್ಗೊಂಡಿತು. ಆನ್ ಲೈನ್ ಮೂಲಕ ಈ ಸ್ಪರ್ಧೆಯನ್ನು ನಡೆಸಲಾಗಿತ್ತು. ಕೇರಳದ ಅಲ್ ಬಿರ್ರ್ ಕೋರ್ಡಿನೇಟರ್ ಇಸ್ಮಾಯಿಲ್ ಮುಜದ್ದಿದಿ ಫಲಿತಾಂಶ ಘೋಷಿಸಿದರು ಎಂದು ಕರ್ನಾಟಕ ಅಲ್ ಬಿರ್ರ್ ಕೋರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News