ಕಾರ್ಕಳ ಮೂಲದ ವೈದ್ಯಗೆ ಅಮೆರಿಕಾದಲ್ಲಿ ಗೌರವ

Update: 2020-05-11 16:21 GMT

ಕಾರ್ಕಳ, ಮೇ 11: ಕೊರೋನ ಸೋಂಕಿತರಿಗೆ ಶುಶ್ರೂಷೆ ನೀಡಿದ ಕಾರ್ಕಳ ಮೂಲದ ಡಾ. ಅವಿನಾಶ್ ಅಡಿಗ ಅವರಿಗೆ ಅಮೆರಿಕದ ನ್ಯೂಜರ್ಸಿಯ ಅವರ ಮನೆ ಮುಂದೆ ಜನ ನೂರಾರು ವಾಹನಗಳಲ್ಲಿ ಸಾಗುವ ಮೂಲಕ ವಿಶೇಷ ಗೌರವದೊಂದಿಗೆ ಧನ್ಯವಾದ ಸಮರ್ಪಿಸಿದರು.

ಅಮೆರಿಕದ ಖ್ಯಾತ ಆಸ್ಪತ್ರೆಯ ಐಸಿಯುನಲ್ಲಿ ಸೇವೆ ಸಲ್ಲಿಸುತ್ತಿರುವ ಅವಿನಾಶ್, ಈವರೆಗೆ 1,500ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹಾಗೆ ಕೊರೋನ ಜಯಿಸಿ ಬಂದ ಸ್ಥಳೀಯರು, ಸಂಘಟನೆಯವರು ಸೇರಿ ನೂರಾರು ವಾಹನಗಳಲ್ಲಿ ಹಾರ್ನ್ ಹಾಕುತ್ತ, ಧನ್ಯವಾದ ಸಮರ್ಪಿಸುವ ಫಲಕ ಗಳನ್ನು ಹಿಡಿದು ಡ್ರೈವ್ ಆಫ್ ಆನರ್ ಸಲ್ಲಿಸಿದರು.

ಕಾರ್ಕಳ ಕುಕ್ಕುಂದೂರು ಸಮೀಪದ ನಿವೃತ್ತ ಉಪನ್ಯಾಸಕ ಗೋವಿಂದ ಅಡಿಗ ಹಾಗೂ ಶಕುಂತಳಾ ಅಡಿಗರ ಪುತ್ರರಾಗಿರುವ ಇವರು, ಬಳ್ಳಾರಿಯ ವಿಐ ಎಂಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ್ದಾರೆ. ಇವರು ರಾಜಸ್ಥಾನದ ಉದಯಪುರ, ಟೆಕ್ಸಾಸ್, ನ್ಯೂಯಾರ್ಕ್‌ಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಇದೀಗ ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ಅಮೆರಿಕಾದಲ್ಲಿ ವಾಸ ವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News