ರಸ್ತೆ ಅಪಘಾತ: ಮುದ್ರಾಡಿ ಪಿಡಿಓಗೆ ಗಾಯ
Update: 2020-05-11 21:52 IST
ಹೆಬ್ರಿ, ಮೇ 11: ಹೆಬ್ರಿ ಗ್ರಾಮದ ಜರವತ್ತು ಕ್ರಾಸ್ ಬಳಿ ಇಂದು ಬೆಳಗ್ಗೆ 10.15ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮುದ್ರಾಡಿ ಪಿಡಿಓ ಸುನೀಲ್ ಎಂಬವರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ಹೆಬ್ರಿ ಪೇಟೆ ಕಡೆಯಿಂದ ಮುದ್ರಾಡಿ ಕಡೆಗೆ ಹೋಗುತ್ತಿದ್ದ ಪಿಡಿಓ ಸುನೀಲ್ ಅವರ ಬೈಕಿಗೆ ಮುದ್ರಾಡಿ ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸುನೀಲ್ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ