ಉಡುಪಿ: ಹೊರರಾಜ್ಯದಿಂದ ಮತ್ತೆ 310 ಮಂದಿ ಜಿಲ್ಲೆಗೆ
ಉಡುಪಿ, ಮೇ 11: ದೇಶಾದ್ಯಂತ ಲಾಕ್‌ಡೌನ್ ಬಳಿಕ ಹೊರರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 310 ಮಂದಿ ಸೋಮವಾರ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ ಎಂದು ಇಲ್ಲಿಗೆ ಬಂದಿರುವ ಮಾಹಿತಿಗಳು ತಿಳಿಸಿವೆ.
ಸರಕಾರ ಲಾಕ್‌ಡೌನ್ ಸಡಿಲಿಸಿ ಹೊರರಾಜ್ಯದವರಿಗೆ ರಾಜ್ಯ ಪ್ರವೇಶಿಸಲು ಆನ್‌ಲೈನ್ ಮೂಲಕ ಅನುಮತಿ ನೀಡಲಾರಂಭಿಸಿದ ಬಳಿಕ ಮೇ 4ರಿಂದ ಈವರೆಗೆ ಒಟ್ಟು 781 ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಇವರಲ್ಲಿ ಪುರುಷರು 542 ಮಂದಿ, ಮಹಿಳೆ ಯರು 178 ಮಂದಿ ಹಾಗೂ ಮಕ್ಕಳು 61 ಮಂದಿ ಸೇರಿದ್ದಾರೆ.
ಕುಂದಾಪುರ ತಾಲೂಕಿಗೆ ತೆಲಂಗಾಣದಿಂದ ಈವರೆಗೆ 146 ಮಂದಿ, ಕೇರಳ-1, ಗುಜರಾತ್-8, ಗೋವಾ-1, ಮಹಾರಾಷ್ಟ್ರ-57, ತಮಿಳುನಾಡು-7 ಸೇರಿ ಒಟ್ಟು 220ಮಂದಿ, ಬೈಂದೂರಿಗೆ ಆಂಧ್ರ ಪ್ರದೇಶದಿಂದ 8, ತೆಲಂಗಾಣ- 134, ಮಹಾರಾಷ್ಟ್ರ-73, ಗುಜರಾತ್-3, ಗೋವಾ-6, ಕೇರಳ-2 ಸೇರಿ ಒಟ್ಟು 226 ಮಂದಿ ಆಗಮಿಸಿದ್ದಾರೆ.
ಕಾರ್ಕಳ ತಾಲೂಕಿಗೆ ಮಹಾರಾಷ್ಟ್ರದಿಂದ 128 ಮಂದಿ, ತೆಲಂಗಾಣ-11, ಗುಜರಾತ್-6, ತಮಿಳುನಾಡು-14, ಕೇರಳ-1, ಗೋವಾ-3 ಸೇರಿ ಒಟ್ಟು 162 ಮಂದಿ, ಕಾಪು ತಾಲೂಕಿಗೆ ಮಹಾರಾಷ್ಟ್ರ-10, ತಮಿಳುನಾಡು-6, ಕೇರಳ-3, ಗೋವಾ-2 ಸೇರಿ ಒಟ್ಟು 21 ಮಂದಿ ಜಿಲ್ಲೆಗೆ ಬಂದಿದ್ದಾರೆ.
ಬ್ರಹ್ಮಾವರ ತಾಲೂಕಿಗೆ ಮಹಾರಾಷ್ಟ್ರದಿಂದ 39, ಆಂಧ್ರ ಪ್ರದೇಶ-6, ತಮಿಳುನಾಡು-2, ತೆಲಂಗಾಣ-2,ಗುಜರಾತ್-1 ಸೇರಿ 50 ಮಂದಿ, ಉಡುಪಿ ತಾಲೂಕಿಗೆ ಮಹಾರಾಷ್ಟ್ರದಿಂದ 60, ಆಂಧ್ರ-7, ಕೇರಳ-8, ತೆಲಂಗಾಣ-10, ತಮಿಳುನಾಡು-12, ಗೋವಾ-1, ಗುಜರಾತ್-1, ಹೊಸದಿಲ್ಲಿ-1 ಸೇರಿ ಒಟ್ಟು 100 ಮಂದಿ ಬಂದಿದ್ದಾರೆ. ಇನ್ನು ಹೆಬ್ರಿಗೆ ಮಹಾರಾಷ್ಟ್ರದಿಂದ 2 ಆಗಮಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.