1500 ಶಾಲಾ ವಿದ್ಯಾರ್ಥಿಗಳ 21ಲಕ್ಷ ರೂ. ಶುಲ್ಕ ಪಾವತಿ: ಅದಮಾರು ಹಿರಿಯ ಶ್ರೀ
ಉಡುಪಿ, ಮೇ 11: ಲೌಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ಉದ್ದೇಶದಿಂದ ಅದಮಾರು ಮಠ ಶಿಕ್ಷಣ ಮಂಡಳಿಯ ಅಧೀನಕ್ಕೆ ಒಳಪಟ್ಟ ಎರಡು ಶಾಲೆಗಳ ಎಲ್ಲ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಮೊದಲ ತಿಂಗಳ ಶುಲ್ಕವನ್ನು ಶ್ರೀವಿಭುದೇಶತೀರ್ಥ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್‌ನಿಂದ ಭರಿಸಲು ನಿರ್ಧರಿಸಲಾಗಿದೆಂದು ಮಂಡಳಿ ಅಧ್ಯಕ್ಷ ಹಾಗೂ ಅದಮಾರು ಹಿರಿಯ ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿಯ ಅದಮಾರು ಮಠದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಸ್ವಾಮೀಜಿ, ಅದಮಾರು ಪೂರ್ಣಪ್ರಜ್ಞ ಕಾಲೇಜು(ನರ್ಸರಿ ಯಿಂದ ಪಿಯುಸಿ) ಮತ್ತು ಪಡುಬಿದ್ರಿ ಗಣಪತಿ ಹೈಸ್ಕೂಲ್(ಒಂದರಿಂದ 10ನೆ ತರಗತಿ)ನಲ್ಲಿ ಕಲಿಯುವ ಸುಮಾರು 1500 ವಿದ್ಯಾರ್ಥಿಗಳ ಒಟ್ಟು 21ಲಕ್ಷ ರೂ. ಶುಲ್ಕವನ್ನು ನೇರವಾಗಿ ಶಾೆಗಳಿಗೆ ನೀಡಲಾಗುವುದು ಎಂದರು.
ಇದರಲ್ಲಿ ಉಳಿದ ಹಣವನ್ನು ಆ ಶಾಲೆಗಳ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣ ಒದಗಿಸಲಾಗುವುದು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೂ ನೆರವು ನೀಡುವ ಕೆಲಸ ಮಾಡಲಾಗು ವುದು. ಈಗಾಗಲೇ ಪರ್ಯಾಯ ಅದಮಾರು ಮಠ ದಿಂದ ಸುಮಾರು 2000 ವಿದ್ಯಾರ್ಥಿಗಳ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಸರಕಾರ ಆದೇಶದಂತೆ ಕೃಷ್ಣಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ದೇವರಿಗೆ ಎಲ್ಲ ರೀತಿಯ ಪೂಜೆಗಳು ನಡೆಯುತ್ತಿವೆ. ಸದ್ಯ ಮಠದ ಹುಂಡಿಗೆ ಬರುವ ಹಣ ಸ್ಥಗಿತಗೊಂಡಿದೆ. ಆದರೂ ನಾವು ಮಠದ ಎಲ್ಲ 150-200 ಸಿಬ್ಬಂದಿಗಳಿಗೆ ಪೂರ್ತಿ ಸಂಬಳವನ್ನು ಪಾವತಿ ಮಾಡಿದ್ದೇವೆ. ಮಠಕ್ಕೆ ಲಾಕ್ ಡೌನ್ ಆರ್ಥಿಕ ಹೊಡೆತ ಆಗದಂತೆ ಶ್ರೀಕೃಷ್ಣ ಮುಖ್ಯಪ್ರಾಣರು ನೋಡಿಕೊಳು್ಳ ತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಡಾ.ಜಿ.ಎಸ್.ಚಂದ್ರ ಶೇಖರ್, ಯು.ಕೆ.ರಾಘವೇಂದ್ರ ರಾವ್, ರಾಧಾಕೃಷ್ಣ ಆಚಾರ್ಯ ಇದ್ದರು.