ಉಡುಪಿ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಿಸಲು ಸಿಪಿಎಂ ಆಗ್ರಹ
Update: 2020-05-11 22:10 IST
ಉಡುಪಿ, ಮೇ 11: ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಣೆ ಮಾಡಿ ವಾರ ಕಳೆದರೂ ಬಸ್ ಸಂಚಾರ ಆರಂಭ ಆಗದೆ ಜನರಿಗೆ ತೊಂದರೆ ಆಗಿದೆ. ಆದುದರಿಂದ ಕೂಡಲೇ ಜಿಲ್ಲೆಯೊಳಗೆ ಮತ್ತು ಉಡುಪಿ ನಗರ ವ್ಯಾಪ್ತಿ ಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಬೇಕೆಂದು ಆಗ್ರಹಿಸಿ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ
ಖಾಸಗಿ ಬಸ್ ಮಾಲಕರು ನಿಗದಿತ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಿಸಬೇಕಾದ ಹಿನ್ನೆಲೆಯಲ್ಲಿ ನಷ್ಟ ಉಂಟಾಗುತ್ತದೆ ಎಂಬ ಅಭಿಪ್ರಾಯ ಸರಿ ಯಾಗಿದೆ. ಸರಕಾರ ತೆರಿಗೆ ವಿನಾಯಿತಿ ನೀಡಿ ಪರಿಹಾರ ನೀಡಬಹುದು. ಖಾಸಗಿ ಬಸ್‌ಗಳು ಆರಂಭ ಆಗದಿದ್ದರೂ ಸಾರ್ವಜನಿಕ ಹಿತದಿಂದ ನಿಯಮ ಬದ್ದ ಅಂತರ ಕಾಪಾಡಿಕೊಂಡು ಉಡುಪಿ ಮತ್ತು ಕುಂದಾಪುರ ಡಿಪೋಗಳ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಜಿಲ್ಲೆಯೊಳಗೆ ಮತ್ತು ಉಡುಪಿ ನಗರ ವ್ಯಾಪ್ತಿ ಯಲ್ಲಿ ಆರಂಭಿಸಬೇಕು ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.