×
Ad

ಅಮೆರಿಕ: ದೈನಂದಿನ ಕೊರೋನ ಸಾವಿನ ಸಂಖ್ಯೆಯಲ್ಲಿ ಇಳಿಕೆ

Update: 2020-05-11 23:22 IST

ವಾಶಿಂಗ್ಟನ್, ಮೇ 11: ಅಮೆರಿಕದಲ್ಲಿ ಕೊರೋನ ವೈರಸ್‌ನಿಂದಾಗಿ ಸಂಭವಿಸುವ ದೈನಂದಿನ ಸಾವಿನ ಸಂಖ್ಯೆಯಲ್ಲಿ ರವಿವಾರ ಕೊಂಚ ಇಳಿಕೆಯಾಗಿದೆ. ಅಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 776 ಮಂದಿ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ-ಅಂಶಗಳು ತಿಳಿಸಿವೆ.

ಇದು ಮಾರ್ಚ್ ಬಳಿಕ ಅತ್ಯಂತ ಕಡಿಮೆ ದೈನಂದಿನ ಸಾವಿನ ಸಂಖ್ಯೆಯಾಗಿದೆ. ಇತ್ತೀಚಿನ ವಾರಗಳಲ್ಲಿ ದೇಶದ ದೈನಂದಿನ ಸಾವಿನ ಪ್ರಮಾಣ 1000 ಮತ್ತು 2,500ರ ನಡುವೆ ಇತ್ತು.

ಇದರೊಂದಿಗೆ ದೇಶದಲ್ಲಿ ಕೋವಿಡ್-19ಗೆ ಬಲಿಯಾದವರ ಒಟ್ಟು ಸಂಖ್ಯೆ 79,522ಕ್ಕೆ ಏರಿದೆ. ಕೊರೋನ ವೈರಸ್‌ನ ಭೀಕರ ಹೊಡೆತಕ್ಕೆ ಸಿಲುಕಿರುವ ಅಮೆರಿಕದಲ್ಲಿ ಸಾಂಕ್ರಾಮಿಕದ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 13,29,072ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News