ಎರಡು ತಿಂಗಳ ಬಳಿಕ ಇಂದಿನಿಂದ ರೈಲು ಸೇವೆ ಆರಂಭ, 54,000 ಟಿಕೆಟ್ ಬುಕ್ಕಿಂಗ್

Update: 2020-05-12 07:50 GMT

ಹೊಸದಿಲ್ಲಿ, ಮೇ 12: ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಸುಮಾರು ಎರಡು ತಿಂಗಳುಗಳ ಬಳಿಕ ಭಾರತೀಯ ರೈಲ್ವೆಯು ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಮಂಗಳವಾರ ಪುನರಾರಂಭಿಸಿದೆ.

ರೈಲ್ವೆ ಇಲಾಖೆ ಸೋಮವಾರದಿಂದ ದಿಲ್ಲಿಯಿಂದ ಮುಂಬೈ, ಚೆನ್ನೈ, ಬೆಂಗಳೂರು, ಕೋಲ್ಕತಾ ಸಹಿತ ದೊಡ್ಡ ನಗರಗಳ ಸಂಪರ್ಕಿಸುವ 15 ರೈಲುಗಳ ಟಿಕೆಟ್ ಬುಕ್ಕಿಂಗ್ ಸಂಜೆ 6 ಗಂಟೆಗೆ ಆರಂಭಿಸಿದ್ದು,ಸುಮಾರು 54,000 ಜನರು ಬುಕ್ಕಿಂಗ್ ಮಾಡಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News