×
Ad

ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆ

Update: 2020-05-12 14:26 IST

ಮಂಗಳೂರು : ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆಯನ್ನು ಸಾಂಕೇತಿಕವಾದ ಆಚರಿಸಲಾಯಿತು.

1820 ಮೇ 12ರಂದು ಹುಟ್ಟಿದ ಇಂಗ್ಲೇಡಿನ ಖ್ಯಾತ ಶುಶ್ರೂಷಕಿ ಪ್ಲೋರೆನ್ಸ್ ನೈಂಟಿಂಗೇಲ್ ಅವರ ಹುಟ್ಟು ಹಬ್ಬದ ನೆನಪಿಗಾಗಿ ಪ್ರತೀ ವರ್ಷ ವಿಶ್ವಾದ್ಯಂತ ಶುಶ್ರೂಷಕರ ದಿನಾಚರಣೆ (World Nurse day)ಯನ್ನು ಆಚರಿಸಲಾಗುತ್ತದೆ.

ವೆನ್ಲಾಕ್ ಆಸ್ಪತ್ರೆಯ ಕೊರೋನ ಬ್ಲಾಕ್ ನಲ್ಲಿ ಪ್ಲೋರೆನ್ಸ್ ನೈಂಟಿಗಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡುವ ಮೂಲಕ ವಿಶ್ವ ಶುಶ್ರೂಷಕ‌ರ ದಿನಾಚರಣೆ ನಡೆಯಿತು.

ಈ ಸಂಧರ್ಭ ವೆನ್ಲಾಕ್ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಅಧೀಕ್ಷಕಿ  ಸರೋಜಿನಿ ಎಸ್ ಹಾಗೂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ, ಕಿರಿಯ ಶುಶ್ರೂಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News