×
Ad

ಏಮ್ಸ್ ಆಸ್ಪತ್ರೆಯಿಂದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಡಿಸ್ಚಾರ್ಚ್

Update: 2020-05-12 14:29 IST

ಹೊಸದಿಲ್ಲಿ, ಮೇ 12: ವಿಪರೀತ ಜ್ವರದ ಕಾರಣಕ್ಕೆ ರವಿವಾರ ರಾತ್ರಿ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಏಮ್ಸ್)ದಾಖಲಾಗಿದ್ದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕನನ್ನು ಹೆಚ್ಚಿನ ನಿಗಾ ವಹಿಸಲು ರವಿವಾರ ರಾತ್ರಿ 8:45ಕ್ಕೆ ಕಾರ್ಡಿಯೊ-ಥೊರಾಸಿಕ್ ವಿಭಾಗಕ್ಕೆ ಸೇರಿಸಲಾಗಿತ್ತು ಎಂದು ಏಮ್ಸ್ ಮೂಲಗಳು ತಿಳಿಸಿವೆ.

ಎರಡು ಬಾರಿ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿರುವ 87ರ ಹರೆಯದ ಸಿಂಗ್‌ರಿಗೆ ಕಾರ್ಡಿಯೊಲಾಜಿ ಪ್ರೊಫೆಸರ್ ಡಾ.ನಿತೀಶ್ ನಾಯಕ್ ಚಿಕಿತ್ಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News