×
Ad

ದುಬೈ - ಮಂಗಳೂರು ಮೊದಲ ವಿಮಾನದ ಬೋರ್ಡಿಂಗ್ ಪ್ರಕ್ರಿಯೆ ಶುರು

Update: 2020-05-12 15:23 IST

ಮಂಗಳೂರು: ಕೊರೋನ ವೈರಸ್ ನಿಂದಾಗಿ ದುಬೈಯಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಹೊತ್ತ ವಿಮಾನವು ( ಏರ್ ಇಂಡಿಯಾ ಎಕ್ಸ್ ಪ್ರೆಸ್ IX384) ದುಬೈ ಸಮಯ ಸಂಜೆ 5:10ಕ್ಕೆ ಹೊರಡಲಿದ್ದು, ಭಾರತೀಯ ಕಾಲಮಾನ ರಾತ್ರಿ 10:10ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ದುಬೈ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2ರಿಂದ ವಿಮಾನ ಹೊರಡಲಿದ್ದು, ಈಗಾಗಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಿದ್ದಾರೆ. ಲಗೇಜ್ ತಪಾಸಣೆ ಇತ್ಯಾದಿ ಪ್ರಕ್ರಿಯೆ ಶುರುವಾಗಿದ್ದು, ಪ್ರತೀ ಪ್ರಯಾಣಿಕರು 725 ದಿರ್ಹಮ್ ಟಿಕೆಟ್ ದರ ಪಾವತಿಸಬೇಕಾಗಿದೆ.

ತೆರವು ಪ್ರಕ್ರಿಯೆಯ ಭಾಗವಾಗಿ ಮೊದಲು ವೈದ್ಯಕೀಯ ತಪಾಸಣೆ ನಡೆಯಲಿದ್ದು, ವಿಮಾನ ನಿಲ್ದಾಣದ ಉಳಿದ ಪ್ರಕ್ರಿಯೆಗಳು ಬಳಿಕ ನಡೆಯಲಿವೆ. ಈಗಾಗಲೇ ಬೋರ್ಡಿಂಗ್ ಶುರುವಾಗಿದ್ದು, 177 ವಯಸ್ಕರು, 2 ಮಕ್ಕಳು ಇಂದಿನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News