ಮಂಗಳೂರು: ಹೋಪ್ ಫೌಂಡೇಶನ್‌ನಿಂದ ವಲಸೆ ಕಾರ್ಮಿಕರಿಗೆ ನೆರವು
Update: 2020-05-12 17:27 IST
ಮಂಗಳೂರು, ಮೇ. 12: ಸಮಾಜ ಸೇವಕ ಸೈಫ್ ಸುಲ್ತಾನ್ ನೇತೃತ್ವದ ಮಂಗಳೂರಿನ ಹೋಪ್ ಫೌಂಡೇಶನ್ ವತಿಯಿಂದ ಸೋಮವಾರ ನಗರದ ವಿವಿಧ ಕಡೆಯಿದ್ದ ವಲಸೆ ಕಾರ್ಮಿಕರಿಗೆ 2,000 ಬಾಟಲ್ ನೀರು, 2,000 ಪ್ಯಾಕೆಟ್ ಬಿಸ್ಕತ್ತು ಮತ್ತು 300 ಎಂಎಸ್ ಮಾಸ್ಕ್ (ಎಂಎಸ್ ಕ್ರೀಡಾ ಉಡುಪು)ಗಳನ್ನು ವಿತರಿಸಲಾಯಿತು.
ಉದ್ಯಮಿ, ಓಕ್ಸಿ ಬ್ಲೂ ಕಂಪೆನಿಯ ಮಾಲಕ ಮನ್ಸೂರ್ ಅಹ್ಮದ್ ಆಝಾದ್ ನೀರಿನ ವ್ಯವಸ್ಥೆ ಮತ್ತು ಎಂಎಸ್ ಸ್ಪೋರ್ಟ್ಸ್ ವೇರ್‌ನವರು ಮಾಸ್ಕ್ ಹಾಗೂ ಬಿಸ್ಕತ್‌ಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು. ವಿತರಣಾ ಕಾರ್ಯದಲ್ಲಿ ನಗರದ ಜೆಪ್ಪು ಅಲ್ ಸಾಧ್ ತಂಡ ಸಹಕರಿಸಿತು.