×
Ad

ಲಾಕ್‍ಡೌನ್: ಗ್ರಾಮೀಣ ಜನತೆಯ ನೆರವಿಗೆ ಬಿಎಫ್‍ಐಎಲ್‍ನ ‘ಭಾರತ್ ಮನಿ ಸ್ಟೋರ್’

Update: 2020-05-12 17:49 IST

ಮಂಗಳೂರು : ಭಾರತ್ ಫೈನಾನ್ಶಿಯಲ್ ಇನ್‍ಕ್ಲೂಶನ್ ಲಿಮಿಟೆಡ್ (ಬಿಎಫ್‍ಐಎಲ್), ಲಾಕ್‍ಡೌನ್‍ನಂಥ ಸಂಕಷ್ಟದ ಸನ್ನಿವೇಶದಲ್ಲಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ 5 ಸಾವಿರಕ್ಕೂ ಗ್ರಾಮಗಳಲ್ಲಿ ತನ್ನ ಗ್ರಾಮೀಣ ವಿತರಣಾ ಸೇವಾ ಕೇಂದ್ರಗಳ (ಆರ್‍ಡಿಎಸ್‍ಪಿ) ವಿಸ್ತøತ ಜಾಲದ ಮೂಲಕ 100 ಕೋಟಿ ರೂಪಾಯಿಗಳ ಹಣಕಾಸು ವಹಿವಾಟಿಗೆ ಸೌಲಭ್ಯ ಕಲ್ಪಿಸಿಕೊಟ್ಟಿದೆ.

ಭಾರತ್ ಮನಿ ಸ್ಟೋರ್ ಎಂದು ಕರೆಯಲಾಗುವ ಆರ್‍ಡಿಎಸ್‍ಪಿ ಕೇಂದ್ರಗಳು ದೇಶದ ಗುಡ್ಡಗಾಡು ಪ್ರದೇಶಗಳಲ್ಲೂ ಗ್ರಾಮೀಣ ಜನತೆಗೆ ಠೇವಣಿ ಇಡಲು ಮತ್ತು ನಗದು ಹಿಂಪಡೆಯಲು ಅನುಕೂಲತೆ ಕಲ್ಪಿಸುತ್ತದೆ. ಗ್ರಾಮೀಣ ಜನತೆ ತಮ್ಮ ಹತ್ತಿರದ ಕಿರಾಣಿ/ ವ್ಯಾಪಾರಿ ಮಳಿಗೆಗಳಿಗೆ ತೆರಳಿ, ಸಾಲ ಮರುಪಾವತಿ, ಹಣ ಠೇವಣಿ ಇಡುವುದು, ನಗದು ಹಿಂಪಡೆಯುವುದು ಮತ್ತು ಯಾವುದೇ ಬಿಲ್ ಪಾವತಿಯಂಥ ಮೂಲಭೂತ ಹಣಕಾಸು ವ್ಯವಹಾರಗಳನ್ನು ನಡೆಸಬಹುದಾಗಿದೆ ಎಂದು ಭಾರತ್ ಮನಿ ಸ್ಟೋರ್‍ನ ಮುಖ್ಯಸ್ಥ ರಿತೇಶ್ ಚಟರ್ಜಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನ ಗಳಿಗೆ ಇದು ಪೂಕರವಾಗಿದೆ. ಗ್ರಾಮೀಣ ಜನತೆ ತಮ್ಮ ಹತ್ತಿರದ ವ್ಯಾಪಾರಿ ಮಳಿಗೆಗಳಲ್ಲಿ ಹಣ ಪಡೆಯಲು ಅವಕಾಶ ಮಾಡಿ ಕೊಡುವ ಮೂಲಕ ನಾಲ್ಕು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನೆರವಾಗಿದೆ. ದೇಶದ ಇಂದಿನ ಲಾಕ್‍ಡೌನ್ ಮತ್ತು ಸಂಚಾರ ನಿರ್ಬಂಧದ ಸ್ಥಿತಿಯಲ್ಲಿ ಭಾರತ್ ಮನಿ ಸ್ಟೋರ್ ಗಳು 5000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿವೆ. ಈ ಮೂಲಕ ಹಾಲಿ ಇರುವ 4 ಲಕ್ಷ ಡಿಬಿಟಿ ಫಲಾನುಭವಿಗಳ ಜತೆಗೆ ಹೆಚ್ಚುವರಿಯಾಗಿ 3.5 ಲಕ್ಷ ಮಂದಿಯ ಬದುಕಿನ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News