×
Ad

ಹೊರರಾಜ್ಯದಿಂದ ಚೆಕ್‌ಪೋಸ್ಟ್ ತಪ್ಪಿಸಿ ಬಂದವರ ಬಗ್ಗೆ ಮಾಹಿತಿ ನೀಡಿ: ಡಿಸಿ

Update: 2020-05-12 19:58 IST

ಉಡುಪಿ, ಮೇ 12: ರಾಜ್ಯ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಿ ಉಡುಪಿ ಜಿಲ್ಲೆಗೆ ಬಂದಿರುವ ಹೊರರಾಜ್ಯದವರನ್ನು ತಕ್ಷಣ ಗುರುತಿಸಿ ಕ್ವಾರೆಂಟೇನ್ ಮಾಡುವ ಕಾರ್ಯ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಆ ಕೆಲಸವನ್ನು ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ವ್ಯಾಪ್ತಿಯ ಕಾರ್ಯಪಡೆ ಮತ್ತು ನಗರ ಪ್ರದೇಶದಲ್ಲಿ ಸ್ಥಳೀಯಾಡಳಿತದ ಪೌರಾಯುಕ್ತರು, ಮುಖ್ಯಾಧಿಕಾರಿ ಮಾಡಬೇಕಾಗುತ್ತದೆ. ಈಗಾಗಲೇ ಯಾರಾದರೂ ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಿ, ಜಿಲ್ಲಾಡಳಿತದ ಗಮನಕ್ಕೆ ಬಾರದೆ ಬೇರೆ ರಾಜ್ಯದಿಂದ ನಮ್ಮ ಜಿಲ್ಲೆಗೆ ಬಂದಿದ್ದರೆ, ಅವರ ಮಾಹಿತಿಯನ್ನು ಸಾರ್ವಜನಿಕರು ಸ್ಥಳೀಯ ಗ್ರಾಪಂ ಅಥವಾ ನಗರ ಸ್ಥಳೀಯಾಡಳಿ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಅಂತಹವರನ್ನು ಗುರುತಿಸಿ, ಆರೋಗ್ಯ ತಪಾಸಣೆ ನಡೆಸಿ, ಕ್ವಾರಂಟೇನ್ ಮಾಡುವ ಕೆಲಸ ಮಾಡಲಾಗು ವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News