ನೀಟ್‌ನಲ್ಲಿ ಒಬಿಸಿ ಕೋಟಾ ಜಾರಿಯಲ್ಲಿ ಕೇಂದ್ರ ಸಂಪೂರ್ಣ ವೈಫಲ್ಯ: ಡಿಎಂಕೆ ಸಂಸದನಿಂದ ಪತ್ರ

Update: 2020-05-12 16:32 GMT
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ

ಹೊಸದಿಲ್ಲಿ,ಮೇ 12: ಅಖಿಲ ಭಾರತ ನೀಟ್ ರ್ಯಾಂಕ್ ಪಟ್ಟಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ನಡೆದ ಪ್ರವೇಶಗಳಲ್ಲಿ ದೇಶಾದ್ಯಂತ ಒಬಿಸಿ ಮೀಸಲಾತಿಯನ್ನು ಜಾರಿಗೊಳಿಸುವಲ್ಲಿ ಸಂಪೂರ್ಣ ವೈಫಲ್ಯವನ್ನು ಪ್ರಮುಖವಾಗಿ ಬಿಂಬಿಸಿ ಡಿಎಂಕೆಯ ರಾಜ್ಯಸಭಾ ಸದಸ್ಯ ವಿಲ್ಸನ್ ಅವರು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ನೀಟ್ ಪರೀಕ್ಷೆಯು ಕಳೆದ ಜನವರಿಯಲ್ಲಿ ನಡೆದಿದ್ದು,ಮೂರು ಕೋರ್ಸ್‌ಗಳಿಗೆ ತಾತ್ಕಾಲಿಕ ಸೀಟ್ ಹಂಚಿಕೆ ಪಟ್ಟಿಯು ಎ.9ರಂದು ಬಿಡುಗಡೆಗೊಂಡಿತ್ತು.

  ತಮಿಳುನಾಡಿನಲ್ಲಿ ತಮಿಳುನಾಡು ಮೀಸಲಾತಿ ಕಾಯ್ದೆ 1994ನ್ನು ಅನ್ವಯಿಸದ್ದರಿಂದ ಒಬಿಸಿ ಸಮುದಾಯವು ತನ್ನ ಅಭ್ಯರ್ಥಿಗಳಿಗೆ ಮೀಸಲಾಗಿದ್ದ ಸ್ಥಾನಗಳ ಪೈಕಿ ಸುಮಾರು 400 ಸ್ಥಾನಗಳಿಂದ ವಂಚಿತವಾಗಿದೆ ಮತ್ತು ಇವುಗಳನ್ನು ಉದ್ದೇಶಪೂರ್ವಕವಾಗಿ ಇತರ ವರ್ಗಗಳಿಗೆ ನೀಡಲಾಗಿರುವುದು ಆಘಾತಕಾರಿಯಾಗಿದೆ ಎಂದು ವಿಲ್ಸನ್ ಪತ್ರದಲ್ಲಿ ತಿಳಿಸಿದ್ದಾರೆ. ಇದು ಅಕ್ರಮ ಮತ್ತು ಅತಾರ್ಕಿಕವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈವರೆಗೆ ಮೊದಲ ಸುತ್ತಿನಲ್ಲಿ 13,237 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

 ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವೈಫಲ್ಯಕ್ಕಾಗಿ ಎಂಸಿಐ,ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು ಮತ್ತು ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ವಿರುದ್ಧ ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ತಾನು ಮಾಡಿಕೊಂಡಿದ್ದ ಮನವಿಯನ್ನು ಕಡೆಗಣಿಸಲಾಗಿದೆ ಎಂದೂ ವಿಲ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News