ಉಡುಪಿ: ಹೊರ ರಾಜ್ಯದಿಂದ ಮತ್ತೆ 552 ಮಂದಿ ಜಿಲ್ಲೆಗೆ
Update: 2020-05-12 20:34 IST
ಉಡುಪಿ, ಮೇ 12: ದೇಶಾದ್ಯಂತ ಲಾಕ್‌ಡೌನ್ ಬಳಿಕ ಹೊರರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ 552 ಮಂದಿ ಮಂಗಳವಾರ 12 ನಿಗದಿತ ಚೆಕ್‌ಪೋಸ್ಟ್‌ಗಳ ಮೂಲಕ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ ಎಂದು ಇಲ್ಲಿಗೆ ಬಂದಿರುವ ಮಾಹಿತಿಗಳು ತಿಳಿಸಿವೆ.
ಸರಕಾರ ಲಾಕ್‌ಡೌನ್ ಸಡಿಲಿಸಿ ಹೊರರಾಜ್ಯದವರಿಗೆ ರಾಜ್ಯ ಪ್ರವೇಶಿಸಲು ಆನ್‌ಲೈನ್ ಮೂಲಕ ಅನುಮತಿ ನೀಡಲಾರಂಭಿಸಿದ ಬಳಿಕ ಮೇ 4ರಿಂದ ಈವರೆಗೆ ಒಟ್ಟು 1333 ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಇವರಲ್ಲಿ ಮಂಗಳವಾರ ಬಂದವರ ಸಂಖ್ಯೆ 552 ಮಂದಿ. ಇಂದು ಪುರುಷರು 388 ಮಂದಿ, ಮಹಿಳೆಯರು 126 ಮಂದಿ ಹಾಗೂ ಮಕ್ಕಳು 38 ಮಂದಿ ಆಗಮಿಸಿದ್ದಾರೆ.
ಈವರೆಗೆ ಕುಂದಾಪುರ ತಾಲೂಕಿಗೆ 378 ಮಂದಿ, ಬೈಂದೂರಿಗೆ-452, ಕಾರ್ಕಳಕ್ಕೆ-264, ಕಾಪು-40, ಬ್ರಹ್ಮಾವರ-83, ಉಡುಪಿ-114 ಹಾಗೂ ಹೆಬ್ರಿ-2 ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ ಎಂದು ವರದಿ ತಿಳಿಸಿದೆ.