×
Ad

ದೋಹ, ಮಸ್ಕತ್ ಕನ್ನಡಿಗರ ಮಂಗಳೂರು ಪ್ರಯಾಣಕ್ಕೆ ಸಿದ್ಧತೆ

Update: 2020-05-12 21:21 IST

ಮಂಗಳೂರು, ಮೇ 12: ‘ವಂದೇ ಮಾತರಂ’ ಯೋಜನೆಯಡಿ ದೋಹಾ ಹಾಗೂ ಮಸ್ಕತ್‌ನಲ್ಲಿ ನೆಲೆಸಿರುವ ಕನ್ನಡಿಗರನ್ನು ಕೂಡ ಶೀಘ್ರವೇ ತಾಯ್ನಾಡಿಗೆ ಕರೆತರಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಮಾಹಿತಿ‌ ಲಭಿಸಿದೆ.

ಸದ್ಯದ ಮೂಲಗಳ ಪ್ರಕಾರ, ಮಸ್ಕತ್‌ನಿಂದ ಮೇ 20ರಂದು ಬೆಂಗಳೂರು ಮೂಲಕ ಏರ್ ಇಂಡಿಯಾ ವಿಮಾನ ಹಾರಾಟ ನಡೆಯಲಿದೆ. ಮಸ್ಕತ್‌ನಿಂದ ಹೊರಡುವ ವಿಮಾನವು ಬೆಂಗಳೂರಿಗೆ ಬಂದು ಆ ಬಳಿಕ ಅಲ್ಲಿಂದ ಮಂಗಳೂರಿಗೆ ಆಗಮಿಸಲಿದೆ ಎಂದು ತಿಳಿದುಬಂದಿದೆ.

ಅದಲ್ಲದೆ ಮೇ 22ರಂದು ದೋಹಾದಿಂದ ಹೊರಡುವ ವಿಮಾನವು ಬೆಂಗಳೂರಿಗೆ ಆಗಮಿಸಿ ಬಳಿಕ ಅಲ್ಲಿಂದ ಮಂಗಳೂರಿಗೆ ಆಗಮಿಸಲಿದೆ ಎಂದು ತಿಳಿದು‌ ಬಂದಿದೆ. ಜತೆಗೆ ಮುಂದಿನ ವಾರ ದುಬೈಯಿಂದ ಮತ್ತೊಂದು ವಿಮಾನ ಕೂಡ ಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News