×
Ad

ಉಡುಪಿ: ರೆಡ್‌ಕ್ರಾಸ್‌ನಿಂದ 111 ಮಂದಿ ವಿಕಲಚೇತರಿಗೆ ಕಿಟ್ ವಿತರಣೆ

Update: 2020-05-12 21:59 IST

ಉಡುಪಿ, ಮೇ 12: ರೆಡ್‌ಕ್ರಾಸ್ ದಿನಾಚರಣೆ ಅಂಗವಾಗಿ ಉಡುಪಿ ರೆಡ್ ಕ್ರಾಸ್ ಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 111 ಮಂದಿ ವಿಕಲಚೇತನರಿಗೆ ದಿನಸಿ ಕಿಟ್ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಅಗತ್ಯವಿದ್ದ 3 ತಿಂಗಳ ಅವಧಿಯ ಔಷಧಗಳು ಹಾಗೂ ಫ್ಯಾಮಿಲಿ ಪ್ಲಾನಿಂಗ್ ಆಫ್ ಇಂಡಿಯಾ ಸಂಸ್ಥೆಗೆ 50,000 ರೂ. ಮೌಲ್ಯದ ಔಷಧಗಳನ್ನು ವಿತರಿಸ ಲಾಯಿತು.

ಉಡುಪಿ ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ಚಂದ್ರಾ ನಾಯ್ಕಾ, ಉಡುಪಿ ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ ದರು. ರೆಡ್‌ಕ್ರಾಸ್ ಉಡುಪಿ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಕೆ.ಕೆ.ಕಲ್ಕೂರ, ಸಿ.ಎಸ್.ರಾವ್, ಅಶೋಕ್ ಹೆಗ್ಡೆ, ಡಾ.ಸುರೇಶ್ ಶೆಣೈ, ಕೆ.ಸನ್ಮತ್ ಹೆಗ್ಡೆ, ಜಯರಾವ್ ಆಚಾರ್ಯ, ಇಂದಿರಾ ಹೆಗ್ಡೆ, ರಮಾದೇವಿ, ಮಹಮ್ಮದ್ ಮೌಲಾ, ಕೊವಿಡ್ 19 ವಾರಿಯಸ್ಸ್ ಡಾ. ಕುಮಾರ್, ವೌರೀಸ್, ನಾಗರಾಜ್ ಶೇಟ್, ರೋಶನ್ ಮೊದಲಾದವರು ಉಪಸ್ಥಿತರಿದ್ದರು.

ರೆಡ್‌ಕ್ರಾಸ್ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿ ದರು. ಗೌರವ ಖಚಾಂಚಿ ಟಿ.ಚಂದ್ರಶೇಖರ್ ವಂದಿಸಿದರು. ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News