×
Ad

​ಮಂಗಳೂರು: ಕ್ವಾರಂಟೈನ್ ವ್ಯವಸ್ಥೆಗೆ ವಿರೋಧ

Update: 2020-05-12 22:34 IST

ಮಂಗಳೂರು, ಮೇ 12: ಕೊರೋನ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಅನಿವಾಸಿ ಕನ್ನಡಿಗರಿಗೆ ನಗರದ ಕೊಡಿಯಾಲ್ ಗುತ್ತು ಪ್ರದೇಶದಲ್ಲಿರುವ ಎಕ್ಸ್ ಪರ್ಟ್ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸ್ಥಳೀಯ ಕೆಲವು ಮಂದಿ ವಿರೋಧ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.

ಈ ಬಗ್ಗೆ ಮಾಹಿತಿ ಪಡೆದ ಶಾಸಕ ವೇದವ್ಯಾಸ್ ಕಾಮತ್ ಸ್ಥಳಕ್ಕೆ ಆಗಮಿಸಿ ಅನಿವಾಸಿ ಕನ್ನಡಿಗರ ಕ್ವಾರಂಟೈನ್‌ನಿಂದ ಸಾರ್ವಜನಿ ಕರಿಗೆ ಯಾವುದೇ ತೊಂದರೆ ಯಾಗುವುದಿಲ್ಲ ವೆಂದು ಮನವರಿಕೆ ಮಾಡಿದರು. ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಲೀಲಾವತಿ ಉಪಸ್ಥಿತರಿದ್ದರು.

ಬರ್ಕೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಶಾಸಕರ ಮನವರಿಕೆಯ ಬಳಿಕ ಸ್ಥಳೀಯರು ಹಿಂದಿರುಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News