ಭಾರತ ಮೂಲದ ಬಿಬಿಸಿ ವರದಿಗಾರ್ತಿಗೆ ಜನಾಂಗೀಯ ನಿಂದನೆ

Update: 2020-05-12 17:11 GMT

ಲಂಡನ್, ಮೇ 12: ಬಿಬಿಸಿ ಸುದ್ದಿ ಚಾನೆಲ್‌ಗಾಗಿ ರವಿವಾರ ವರದಿ ಮಾಡುತ್ತಿದ್ದ ಭಾರತ ಮೂಲದ ವರದಿಗಾರ್ತಿಯನ್ನು ವ್ಯಕ್ತಿಯೊಬ್ಬ ಲೀಸೆಸ್ಟರ್‌ನಲ್ಲಿ ಜನಾಂಗೀಯವಾಗಿ ನಿಂದಿಸಿದ ಘಟನೆಯೊಂದು ವರದಿಯಾಗಿದೆ.

ಲಾಕ್‌ಡೌನ್‌ನಿಂದ ಹಂತಹಂತವಾಗಿ ಹೊರಬರುವ ಬಗ್ಗೆ ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ರವಿವಾರ ಸಂಜೆ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ಪಡೆಯಲು ವರದಿಗಾರ್ತಿ ಸೀಮಾ ಕೊಟೇಚ ಕೆಲವು ಅತಿಥಿಗಳನ್ನು ಸಾಲಿನಲ್ಲಿ ನಿಲ್ಲಿಸುತ್ತಿದ್ದಾಗ 50 ವರ್ಷದ ವ್ಯಕ್ತಿಯೊಬ್ಬ ತಡೆದು ಜನಾಂಗೀಯವಾಗಿ ನಿಂದಿಸಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಆರೋಪಿಯನ್ನು ಬಂಧಿಸಿ ಮಂಗಳವಾರ ಇಲ್ಲಿನ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News