×
Ad

ಉಡುಪಿ: ಸಾಮಾಜಿಕ ಅರಣ್ಯ ಇಲಾಖೆಯಲ್ಲಿ 1.93 ಗಿಡಗಳು ಲಭ್ಯ

Update: 2020-05-12 22:57 IST

ಉಡುಪಿ, ಮೇ 12: ಉಡುಪಿ, ಕಾರ್ಕಳ ಹಾಗೂ ಕುಂದಾಪುರ ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರಗಳಲ್ಲಿ 2019-20ನೇ ಸಾಲಿನಲ್ಲಿ ಸಾರ್ವಜನಿಕರಿಗೆ ವಿವಿಧ ಜಾತಿಯ ಒಟ್ಟು 1,93,400 ಸಸ್ಯಗಳು ರಿಯಾಯತಿ ದರದಲ್ಲಿ ಮಾರಾಟಕ್ಕೆ ಲಭ್ಯ ಇವೆ.

ಉಡುಪಿ ವಲಯದ ಪೆರ್ಡೂರು ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ ಸಾಗುವಾನಿ, ಬಿಲ್ವಪತ್ರ, ಗೇರು, ನೆಲ್ಲಿ, ದಾಳಿಂಬೆ, ನುಗ್ಗೆ, ಕಹಿಬೇವು, ಬಾಗೆ, ಸಿಲ್ವರ್, ಅಶ್ವಗಂಧ, ಬಿದಿರು, ಮುತ್ತುಗ, ಹೊಳೆದಾಸವಾಳ, ಬಾದಾಮಿ, ಲಿಂಬೆ, ಸೀತಾಫಲ, ಮಹಾಗನಿ, ಹೊನ್ನೆ, ಶ್ರೀಗಂಧ, ಕರಿಬೇವು, ಕೋಳಿಜುಟ್ಟು, ಶಿವನೆ, ಸೀಮಾರೂಬ, ಹೆಬ್ಬೇವು, ಹಲಸು, ಬೀಟೆ, ಅತ್ತಿ, ನೇರಳೆ, ಪುರ್ನಪುಳಿ, ಪೇರಳೆ, ಮಾವು ಸಹಿತ ಒಟ್ಟು 68750 ಗಿಡಗಳು ಲಭ್ಯ ಇದ್ದು, ಆಸಕ್ತರು ದೂರವಾಣಿ ಸಂಖ್ಯೆ: 8722671485 ಸಂಪರ್ಕಿಸಬಹುದಾಗಿದೆ.
ಕಾರ್ಕಳ ಸಾಮಾಜಿಕ ಅರಣ್ಯ ವಲಯದ ಕೊಡಿಗೆ ಕೇಂದ್ರೀಯ ಸಸ್ಯಕ್ಷೇತ್ರ ಮಾಳದಲ್ಲಿ, ಸಾಗುವಾನಿ, ಬಿಲ್ವಪತ್ರ, ಗೇರು, ನೆಲ್ಲಿ, ದಾಳಿಂಬೆ, ನುಗ್ಗೆ, ಕಹಿಬೇವು, ಬಾಗೆ, ಸಿಲ್ವರ್, ಅಶ್ವಗಂಧ, ಬಿದಿರು, ಮುತ್ತುಗ, ಹೊಳೆದಾಸವಾಳ, ಬಾದಾಮಿ, ಲಿಂಬೆ, ಸೀತಾಪಲ, ಮಹಾಗನಿ, ಹೊನ್ನೆ, ಶ್ರೀಗಂಧ, ಕರಿಬೇವು, ಕೋಳಿಜುಟ್ಟು, ಶಿವನೆ, ಸೀಮಾರೂಬ, ಹೆಬ್ಬೇವು, ಹಲಸು, ಬೀಟೆ, ಅತ್ತಿ, ನೇರಳೆ, ಪುರ್ನಪುಳಿ, ಪೇರಳೆ, ಮಾವು ಸಹಿತ ಒಟ್ಟು 68250 ಗಿಡಗಳು ಲಭ್ಯ ಇದ್ದು, ಆಸಕ್ತರು ದೂರವಾಣಿ ಸಂಖ್ಯೆ: 08258-232965 ಸಂಪರ್ಕಿಸಬಹುದಾಗಿದೆ.

ಕುಂದಾಪುರ ಸಾಮಾಜಿಕ ಅರಣ್ಯ ವಲಯದ ಹಾಲಾಡಿ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ ಸಾಗುವಾನಿ, ಬಿಲ್ವಪತ್ರ, ಗೇರು, ನೆಲ್ಲಿ, ದಾಳಿಂಬೆ, ನುಗ್ಗೆ, ಕಹಿಬೇವು, ಬಾಗೆ, ಸಿಲ್ವರ್, ಅಶ್ವಗಂಧ, ಬಿದಿರು, ಮತ್ತುಗ, ಹೊಳೆದಾಸವಾಳ, ಬಾದಾಮಿ, ಲಿಂಬೆ, ಸೀತಾಪಲ, ಮಹಾಗನಿ, ಹೊನ್ನೆ, ಶ್ರೀಗಂಧ, ಕರಿಬೇವು, ಕೋಳಿಜುಟ್ಟು, ಶಿವನೆ, ಸೀಮಾರೂಬ, ಮಹಾಗನಿ, ಹೆಬ್ಬೇವು, ಬನ್ನೇರಳೆ, ಟಕೋಮಾ, ಮೇಪ್ಲವರ್, ಹೊಂಗೆ, ಮತ್ತಿ, ಹಲಸು, ಹೆಬ್ಬಲಸು, ರಕ್ತಚಂದನ, ಸಿರಿಹೊನ್ನೆ, ಬೀಟೆ, ವಾಟೆಹುಳಿ, ಧೂಪ ಸಹಿತ ಒಟ್ಟು 56400 ಗಿಡಗಳು ಲಭ್ಯ ಇದ್ದು, ಆಸಕ್ತರು ದೂರವಾಣಿ ಸಂಖ್ಯೆ: 08254-295098 ಸಂಪರ್ಕಿಸಬಹುದಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News