×
Ad

ಹೆಚ್ಚುವರಿ ದರ ವಸೂಲಿಯ ಆರೋಪ: ಕಡಬದಲ್ಲಿ ಎಂಎಸ್ಐಲ್ ಮದ್ಯದಂಗಡಿಯಲ್ಲಿ ಅಬಕಾರಿ ಅಧಿಕಾರಿಗಳಿಂದ ಪರಿಶೀಲನೆ

Update: 2020-05-13 15:24 IST

ಕಡಬ, ಮೇ13: ಸರಕಾರಿ ಸ್ವಾಮ್ಯದ ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲು ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ದಾಳಿ ನಡೆಸಿದ ಅಬಕಾರಿ‌ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಕಡಬದ ಪಂಜ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಎಂಎಸ್ಐಲ್ ಮದ್ಯ ಮಾರಾಟ ಮಳಿಗೆಯಲ್ಲಿ ಅಧಿಕ ದರ ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕಡಬದ ಪತ್ರಕರ್ತರೋರ್ವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಾರುವೇಷದಲ್ಲಿ ಮದ್ಯ ಖರೀದಿಸಿದ್ದರು.

ಪತ್ರಕರ್ತನಿಂದ ಅಧಿಕ ದರ ವಸೂಲಿ ಮಾಡಿದ ವೇಳೆ ದಾಳಿ‌ ನಡೆಸಿದ ಅಬಕಾರಿ ನಿರೀಕ್ಷಕಿ ಸುಜಾತಾ ಹಾಗೂ ಸಿಬ್ಬಂದಿ, ಪ್ರಕಾಶ್ ಎಂಬವರಿಂದ ಅಧಿಕ ದರ ವಸೂಲಿ ದೂರು ಸ್ವೀಕರಿಸಿ, ತಪಾಸಣೆ ನಡೆಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News