×
Ad

ರಸ್ತೆಗೆ ಇಳಿಯದ ಉಡುಪಿ ಸಿಟಿ ಬಸ್‌ಗಳು

Update: 2020-05-13 20:56 IST

ಉಡುಪಿ, ಮೇ 13: ಉಡುಪಿಯಲ್ಲಿ ಇಂದು ಕೆಲವು ಸರಕಾರಿ ಹಾಗೂ ಖಾಸಗಿ ಬಸ್‌ಗಳು ಇಂದಿನಿಂದ ಸಂಚಾರ ಆರಂಭಿಸಿದ್ದರೂ, ಸಿಟಿ ಬಸ್‌ಗಳು ಮಾತ್ರ ಈವರೆಗೆ ರಸ್ತೆಗೆ ಇಳಿಯುವ ಮನಸ್ಸು ಮಾಡಿಲ್ಲ.

ಜಿಲ್ಲಾಡಳಿತ ಆದೇಶದಲ್ಲಿ ಇಂದಿನಿಂದ ಮಣಿಪಾಲ, ಮಲ್ಪೆ, ಹೂಡೆ, ಅಲೆವೂರು ಮಾರ್ಗಕ್ಕೆ ಸರಕಾರಿ ಬಸ್ ಸಂಚಾರ ಆರಂಭಿಸುವಂತೆ ಸೂಚಿಸಿ ದ್ದರೂ, ಪ್ರಯಾಣಿಕರಿಲ್ಲದೆ ಈ ಬಸ್‌ಗಳು ಓಡಾಟ ನಡೆಸಿರಲಿಲ್ಲ. ಇದರಿಂದ ಸ್ಥಳೀಯ ಜನತೆ ತೊಂದರೆ ಪಡುವಂತಾಯಿತು.

ಅದೇ ರೀತಿ ಸರಕಾರ ಸಿಟಿ ಬಸ್‌ಗಳಿಗೆ ಸಂಬಂಧಿಸಿ ಕೆಲವೊಂದು ಬೇಡಿಕೆ ಗಳು ಈಡೇರದ ಕಾರಣ ಸಿಟಿಬಸ್‌ಗಳು ಕೂಡ ಇಂದು ಸಂಚಾರ ಆರಂಭಿಸ ಲಿಲ್ಲ. ಇದರಿಂದ ಉಡುಪಿ ಸಿಟಿ ಬಸ್ ನಿಲ್ದಾಣ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಇದರಿಂದ ನಗರದಲ್ಲಿ ಜನ ಸಂಚಾರ ಕೂಡ ಹೆಚ್ಚು ಕಂಡುಬಂದಿರ ಲಿಲ್ಲ. ‘ಸಿಟಿ ಬಸ್ ಆರಂಭಿಸುವ ಕುರಿತು ಮಾಲಕರ ಸಭೆಯನ್ನು ಇಂದು ಕರೆಯ ಲಾಗಿದೆ. ಆದರೆ ತೆರಿಗೆ ರಿಯಾಯಿತಿ ಹಾಗೂ ಬಸ್‌ಗಳನ್ನು ಆರ್‌ಟಿಓಗೆ ಸರೆಂಡರ್ ಮಾಡುವ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಆದುದರಿಂದ ಈ ಬಗ್ಗೆ ಶೀಘ್ರವೇ ಸಭೆ ಕರೆದು ನಿರ್ಧಾರ ಮಾಡಲಾಗುವುದು. ಅಲ್ಲಿಯ ವರೆಗೆ ಸಿಟಿಬಸ್ ಸಂಚಾರ ನಡೆಯುವುದಿಲ್ಲ’ ಎಂದು ಸಿಟಿಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News