ಕ್ಯಾಮೆರಾ ಟ್ರಾಪ್ ಉಪಕರಣ ಕಳವು
Update: 2020-05-13 20:57 IST
ಹೆಬ್ರಿ, ಮೇ 13: ಅಂಡಾರು ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯ ಕಬ್ಬಿನಾಲೆ ಗಸ್ತಿನ ಮುದ್ರಾಡಿ ಗ್ರಾಮದ ಹೆಮ್ಮಣ್ಣು ಎಂಬಲ್ಲಿ ಪ್ರಾಣಿಗಳ ಗಣತಿ ಕಾರ್ಯಕ್ಕಾಗಿ ಆಳವಡಿಸಿಲಾದ ಎರಡು ಕ್ಯಾಮೆರಾ ಟ್ರಾಪ್ ಉಪಕರಣಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ.
ಮಾ.13ರಂದು ಅರಣ್ಯ ಇಲಾಖೆ ವತಿಯಿಂದ ಎರಡು ಕ್ಯಾಮೆರಾ ಟ್ರಾಪ್ ಉಪಕರಣಗಳನ್ನು ಅಳವಡಿಸಿದ್ದು, ಮೇ 7ರಿಂದ 11ರ ಮಧ್ಯಾವಧಿಯಲ್ಲಿ ಈ ಕ್ಯಾಮೆರಾ ಟ್ರಾಪ್ ಉಪಕರಣಗಳು ಕಳವಾಗಿರುವುದು ಕಂಡುಬಂದಿದೆ. ಇವುಗಳ ಮೌಲ್ಯ 32,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.