×
Ad

ಕ್ಯಾನ್ಸರ್ ರೋಗಿಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಮನವಿ

Update: 2020-05-13 21:03 IST

ಉಡುಪಿ, ಮೇ 13: ಚಾಲಕರಾಗಿ ದುಡಿಯುತ್ತಿದ್ದ ಕಾಪು ಕರಂದಡಿ ನಿವಾಸಿ ಎಂ.ಅಶ್ರಫ್ (35) ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಇವರ ಚಿಕಿತ್ಸೆ ಗಾಗಿ ಆರ್ಥಿಕ ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಲಾಗಿದೆ.

ಚಾಲಕರಾಗಿ ದುಡಿಯುತ್ತಿದ್ದ ಇವರಿಗೆ ಕಳೆದ ಜನವರಿಯಲ್ಲಿ ಪರೀಕ್ಷೆ ಮಾಡಿ ದಾಗ ಕ್ಯಾನ್ಸರ್ ಕಾಯಿಲೆ ಇರುವುದು ದೃಢಪಟ್ಟಿತ್ತು. ಇದೀಗ ಅವರು ಆರೋಗ್ಯ ಕ್ಷೀಣಿಸುತ್ತಿದ್ದು, ಎದ್ದು ನಿಂತು ಕೆಲಸ ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಇವರಿಗೆ ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿದ್ದಾರೆ.

ತೀರಾ ಬಡ ಕುಟುಂಬ ಇವರದ್ದಾಗಿದ್ದು, ಇವರೇ ಈ ಕುಟುಂಬದ ಆಧಾರ ಸ್ತಂಭ ಆಗಿದ್ದಾರೆ. ಆದರೆ ಈಗ ದುಡಿಯಲು ಸಾಧ್ಯವಾಗದೆ ಕುಟುಂಬ ನಿರ್ವಹಣೆ ಮತ್ತು ಚಿಕಿತ್ಸೆಗೆ ಆದಾಯ ಇಲ್ಲದೆ ಇಡೀ ಕುಟುಂಬ ಸಂಕಷ್ಟ ಪಡು ತ್ತಿದೆ. ಇವರ ಚಿಕಿತ್ಸೆಗೆ ತಿಂಗಳಿಗೆ ಸುಮಾರು 40 ರಿಂದ 50 ಸಾವಿರ ರೂ. ವ್ಯಯವಾಗುತ್ತಿದೆ. ಆದುದರಿಂದ ದಾನಿಗಳು ಇವರ ಚಿಕಿತ್ಸೆ ನೆರವು ನೀಡುವಂತೆ ಮನವಿ ಮಾಡಲಾಗಿದೆ.

ಎಂ.ಅಶ್ರಫ್ ಕೆ., ಕೆನರಾ ಬ್ಯಾಂಕ್ ಕಾಪು ಶಾಖೆಯ ಖಾತೆ ನಂಬರ್ 2409101008846, ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ0002409 ಇಲ್ಲಿಗೆ ಹಣ ಕಳುಹಿಸಬಹುದು. ಇವರ ಮೊಬೈಲ್ ನಂಬರ್- 8970251983. ಇವರ ವಿಳಾಸ- ಹೌಸ್ ನಂಬರ್ 029, ಪಂಜಿತ್ತೂರು, ಕರಂದಾಡಿ, ಮಜೂರು ಕಾಪು, ಉಡುಪಿ ತಾಲೂಕು ಮತ್ತು ಜಿಲ್ಲೆ. 574106.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News