ಕೊರೋನ ವಿರುದ್ಧದ ಹೋರಾಟ: ಪಿಎಂ ಕೇರ್ಸ್ ನಿಧಿಯಿಂದ 3,100 ಕೋಟಿ ರೂ.

Update: 2020-05-13 15:56 GMT

ಹೊಸದಿಲ್ಲಿ: ಕೋವಿಡ್ 19 ವಿರುದ್ಧದ ಹೋರಾಟಕ್ಕಾಗಿ ಪಿಎಂ ಕೇರ್ಸ್ ನಿಧಿಯಿಂದ 3,100 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಪ್ರಧಾನಿಯವರ ಕಚೇರಿಯ ಪ್ರಕಟನೆ ತಿಳಿಸಿದೆ.

“3,100 ಕೋಟಿ ರೂ.ಗಳಲ್ಲಿ 2000 ಕೋಟಿ ರೂ.ಗಳನ್ನು ವೆಂಟಿಲೇಟರ್ ಗಳನ್ನು ಖರೀದಿಸಲು, 1000 ಕೋಟಿ ರೂ,ಗಳನ್ನು ವಲಸೆ ಕಾರ್ಮಿಕರಿಗಾಗಿ ಮತ್ತು 100 ಕೋಟಿ ರೂ.ಗಳನ್ನು ಲಸಿಕೆ ಅಭಿವೃದ್ಧಿಗೆ ಬೆಂಬಲವಾಗಿ ಮೀಸಲಿರಿಸಲಾಗುವುದು” ಎಂದು ಪ್ರಕಟನೆ ತಿಳಿಸಿದೆ.

ಪಿಎಂ ಕೇರ್ಸ್ ನಿಧಿಯಿಂದ 50 ಸಾವಿರ ವೆಂಟಿಲೇಟರ್ ಗಳನ್ನು ಖರೀದಿಸಲಾಗುವುದು. ಇದಕ್ಕೆ 2,000 ಕೋಟಿ ರೂ. ವೆಚ್ಚವಾಗಲಿದೆ” ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News