ಕೊರೋನ ವೈರಸ್ : ಸೋಮೇಶ್ವರ ಗ್ರಾಮದ ಪಿಲಾರು ಸೀಲ್‌ಡೌನ್
Update: 2020-05-13 21:32 IST
ಮಂಗಳೂರು, ಮೇ 13: ಸೋಮೇಶ್ವರ ಗ್ರಾಮದ ದಾರಂದಬಾಗಿಲು ನಿವಾಸಿ ಮಹಿಳೆಗೆ ಕೊರೋನ ದೃಢವಾದ ಹಿನ್ನೆಲೆಯಲ್ಲಿ ಸೋಮೇಶ್ವರದ ಪಿಲಾರು ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.
ಅದರಂತೆ 95 ಮನೆಗಳು, 9 ಅಂಗಡಿ, 1 ಕಚೇರಿ ಸೇರಿದಂತೆ ಒಟ್ಟು 430 ಮಂದಿ ಸೀಲ್‌ಡೌನ್ ಪ್ರದೇಶಕ್ಕೆ ಒಳಪಡಲಿದ್ದಾರೆ. ಸೀಲ್‌ಡೌನ್ ಪ್ರದೇಶದ ನಂತರದ 5 ಕಿಮೀ ವ್ಯಾಪ್ತಿಯನ್ನು ಬರ್ ರೆನ್ ಎಂದು ಘೋಷಿಸಲಾಗಿದ್ದು, 21,390 ಮನೆಗಳು, 5,211 ಅಂಗಡಿಗಳು ಸೇರಿ 1,03,098 ಮಂದಿ ಬರ್ ರೆನ್‌ನಡಿಯಲ್ಲಿ ಬರುತ್ತಾರೆ. ಈ ಪ್ರದೇಶದಲ್ಲಿ ಇನ್ಸಿಡೆಂಟ್ ಕಮಾಂಡರ್ ಆಗಿ ಮಂಗಳೂರು ತಹಶೀಲ್ದಾರರನ್ನು ನೇಮಕ ಮಾಡಲಾಗಿದೆ.