×
Ad

ಕೊರೋನ ವೈರಸ್ ಎದುರಿಸಲು ನ್ಯಾಯಾಧೀಶರು, ಮತ್ತು ವಕೀಲರಿಗೆ ನೂತನ ಉಡುಪು ಸಂಹಿತೆ

Update: 2020-05-13 21:36 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮೇ 13: ನ್ಯಾಯಾಧೀಶರು ಮತ್ತು ವಕೀಲರು ಕನಿಷ್ಠ ಕೊರೋನ ವೈರಸ್ ಪಿಡುಗು ಅಂತ್ಯಗೊಳ್ಳುವವರೆಗಾದರೂ ತಮ್ಮ ಸಾಂಪ್ರದಾಯಿಕ ಕಪ್ಪು ಕೋಟ್‌ಗಳು ಮತ್ತು ಗೌನ್‌ಗಳಿಗೆ ಶೀಘ್ರವೇ ವಿದಾಯ ಹೇಳಬಹುದು. ನೂತನ ಉಡುಪು ಸಂಹಿತೆಯನ್ನು ಶೀಘ್ರವೇ ಪ್ರಕಟಿಸುವುದಾಗಿ ಬುಧವಾರ ತಿಳಿಸಿದ ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬ್ಡೆ ಅವರು,ಅಲ್ಲಿವರೆಗೆ ಕಪ್ಪು ಉಡುಪುಗಳಿಂದ ದೂರವಿರುವಂತೆ ವಕೀಲ ಸಮುದಾಯಕ್ಕೆ ಸೂಚಿಸಿದರು.

ತಮ್ಮ ನಿವಾಸಗಳಿಂದಲೇ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗಳನ್ನು ನಡೆಸುತ್ತಿದ್ದ ನ್ಯಾಯಾಧೀಶರು ಮಂಗಳವಾರದಿಂದ ನ್ಯಾಯಾಲಯಗಳಲ್ಲಿ ಕಲಾಪಗಳನ್ನಾರಂಭಿಸಿದ್ದಾರೆ. ಆದರೆ ಕಕ್ಷಿದಾರರು ಈಗಲೂ ನ್ಯಾಯಾಲಯಕ್ಕೆ ತೆರಳುವಂತಿಲ್ಲ ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಲಾಪದಲ್ಲಿ ಭಾಗಿಯಾಗಬಹುದು. ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯನ್ನು ಕೈತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರ ನ್ಯಾಯಾಧೀಶರು ಕಪ್ಪು ಕೋಟಿನ ಬದಲು ಬಿಳಿಯ ಶರ್ಟ್ ಮತ್ತು ನೆಕ್ ಬ್ಯಾಂಡ್ ಧರಿಸಿದ್ದರು.

ಕಪ್ಪು ಕೋಟುಗಳು ಮತ್ತು ಗೌನ್‌ಗಳು ವೈರಸ್ ದಾಳಿಗೆ ಸುಲಭವಾಗಿ ಗುರಿಯಾಗುತ್ತವೆ,ಹೀಗಾಗಿ ಸದ್ಯಕ್ಕೆ ಅವುಗಳನ್ನು ಧರಿಸುವುದರಿಂದ ದೂರವಿರಿ ಎಂದು ನ್ಯಾ.ಬೋಬ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News