×
Ad

​ಹೂವಿನ ಬೆಳೆಗಾರರಿಗೆ ನಷ್ಠ ಪರಿಹಾರ: ಉಡುಪಿ ಜಿಲ್ಲಾಧಿಕಾರಿ

Update: 2020-05-13 21:46 IST

ಉಡುಪಿ, ಮೇ 13: ಕೋವಿಡ್-19ರ ಕಾರಣ ದೇಶದಲ್ಲಿ ವಿಧಿಸಿರುವ ಲಾಕ್‌ಡೌನ್‌ನಿಂದ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ರೂ. 25,000 ಪರಿಹಾರವನ್ನು ಗರಿಷ್ಟ ಒಂದು ಹೆಕ್ಟೇರ್ ವಿಸ್ತೀರ್ಣಕ್ಕೆ ಮುಖ್ಯಮಂತ್ರಿಗಳು ಘೋಷಿಸಿದ್ದು, ಪ್ರಸ್ತುತ ಘೋಷಿಸಿರುವ ಪರಿಹಾರವನ್ನು ರೈತರಿಗೆ ಪಾವತಿಸುವ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಪರಿಹಾರವನ್ನು 2019-20ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ಮಾಹಿತಿಯ ಆಧಾರದಲ್ಲಿ ಪಾವತಿಸಲಾಗುವುದು.ರೈತರು ತಾವು ಬೆಳೆದಿರುವ ಬಹು ವಾರ್ಷಿಕ ಪುಷ್ಪ ಬೆಳೆಯು 2019-20ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬಗ್ಗೆ ಹಾಗೂ ವಾರ್ಷಿಕ ಪುಷ್ಪ ಬೆಳೆಗಳು 2019-20ನೆ ಸಾಲಿನ ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬಗ್ಗೆ ಸಂಬಂದಿಸಿದ ತಾಲೂಕು ತೋಟಗಾರಿಕೆ ಇಲಾಖೆಯ ಕಚೇರಿ ಗಳಲ್ಲಿ ಪರಿಶೀಲಿಸಿಕೊಳ್ಳಬೇಕು.

ರೈತರು ಈಗಾಗಲೇ ಇಲಾಖೆಯ ‘ಫ್ರುಟ್ಸ್’ ತಂತ್ರಾಂಶದಲ್ಲಿ ನೋಂದಣಿ ಯಾಗಿದ್ದರೆ ಪರಿಹಾರವನ್ನು ನೇರವಾಗಿ ಪಾವತಿಸಲಾಗುವುದು. ಬೆಳೆ ಸಮೀಕ್ಷೆ ಯಲ್ಲಿ ಪುಷ್ಪ ಬೆಳೆ ದಾಖಲಾಗದ ರೈತರು ಅರ್ಜಿ, ಪಹಣಿ, ಆಧಾರ್‌ನ ಪ್ರತಿ, ಬ್ಯಾಂಕ್‌ಪಾಸ್ ಪುಸ್ತಕದ ಪ್ರತಿ ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನು ತಾಲೂಕು ತೋಟಗಾರಿಕೆ ಇಲಾಖೆಯ ಕಛೇರಿಗೆ ಸಲ್ಲಿಸಬೇಕು. ಅರ್ಜಿದಾರರ ಸ್ಥಳ ಪರಿಶೀಲನೆಯನ್ನು ಜಂಟಿ ಪರಿಶೀಲನಾ ತಂಡ ಕೈಗೊಂಡು ನಿಯಮಾ ನುಸಾರ ಪರಿಹಾರವನ್ನು ಪಾವತಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿಪಂ), ಉಡುಪಿ ಜಿಲ್ಲೆ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಕುಂದಾಪುರ ತಾಲೂಕು: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಕಾರ್ಕಳ ತಾಲೂಕು 08258-230288 ಇವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News