ಉಡುಪಿ: ಚೈಲ್ಡ್‌ಲೈನ್‌ನಿಂದ ಸಂಚಾರಿ ವಾಹನದ ಮೂಲಕ ಜನಜಾಗೃತಿ
Update: 2020-05-13 21:57 IST
ಉಡುಪಿ, ಮೇ 13: ಚೈಲ್ಡ್‌ಲೈನ್ ವತಿಯಿಂದ ಕೋವಿಡ್-19 ಮತ್ತು ಮಕ್ಕಳ ಸಹಾಯವಾಣಿಯ ಬಗ್ಗೆ ಮೇ 8ರಿಂದ 12 ರವರೆಗೆ ಕುಂದಾಪುರ, ಕಾರ್ಕಳ ಮತ್ತು ಕಾಪು ತಾಲೂಕಿನ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಸಿದ ಸಂಚಾರಿವಾಹನ ಮೂಲಕ ಮಾಹಿತಿ ಹಾಗೂ ಜನಜಾಗೃತಿ ಮೂಡಿಸಲಾಯಿತು.
ಗ್ರಾಮ ಪಂಚಾಯಿತಿ, ಪೋಲಿಸ್ ಠಾಣೆ, ಮಾರುಕಟ್ಟೆ, ಅಂಚೆ ಕಛೇರಿ, ನ್ಯಾಯಬೆಲೆ ಅಂಗಡಿ, ಸಮುದಾಯ ಆರೋಗ್ಯ ಕೇಂದ್ರ ಮುಂತಾದ ಕಡೆಗಳಲ್ಲಿ ಜನ ಹೆಚ್ಚಾಗಿ ಸೇರುವ ಜಾಗಗಳಲ್ಲಿ ಸುರಕ್ಷಿತಾ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸಲಾಯಿತು. ಅಲ್ಲದೇ ಚೈಲ್ಡ್‌ಲೈನ್ 1098 ಹಾಗೂ ಕೋವಿಡ್-19 ಮುಂಜಾಗ್ರತ ಕ್ರಮಗಳ ಬಗ್ಗೆ ಭಿತ್ತಿಪತ್ರಗಳನ್ನು ಅಂಟಿಸುವ ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ಜನಜಾಗ್ರತಿ ಮೂಡಿಸಲಾಯಿತು.
ಚೈಲ್ಡ್‌ಲೈನ್ ನಿರ್ದೇಶಕರಾದ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚೈಲ್ಡ್‌ಲೈನ್ ಸಂಯೋಜಕಿ ಕಸ್ತೂರಿ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.