ಕೊರೋನ: ಐಸಿಐಸಿಐ ಬ್ಯಾಂಕ್‌ನಿಂದ ಸುರಕ್ಷಾ ಸಾಧನಗಳ ಕೊಡುಗೆ

Update: 2020-05-13 16:29 GMT

ಉಡುಪಿ, ಮೇ 13: ಕೊರೋನಾ ವೈರಸ್ ಸೋಂಕಿನ ವಿರುದ್ಧ ನಾಗರಿಕರಿಗೆ ಸುರಕ್ಷೆ ನೀಡುವ ಸಲುವಾಗಿ ರಾಜ್ಯ ಸರಕಾರ, ಆಸ್ಪತ್ರೆಗಳು ಮತ್ತು ಪೊಲೀಸ್ ಪಡೆಗೆ ಸುರಕ್ಷಾ ಸಾಧನಗಳನ್ನು ಒದಗಿಸುವ ಮೂಲಕ ಐಸಿಐಸಿಐ ಬ್ಯಾಂಕ್, ಕರ್ನಾಟಕ ಸರಕಾರಕ್ಕೆ ದೊಡ್ಡ ಪ್ರಮಾಣದ ನೆರವು ನೀಡುತ್ತಿದೆ.

ಉಡುಪಿ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ಬೆಳಗಾವಿ, ಕಲ್ಬುರ್ಗಿ, ಚಿತ್ರದುರ್ಗ ಜಿಲ್ಲೆಗಳಲ್ಲಿರುವ ಬ್ಯಾಂಕ್ ವತಿಯಿಂದ 66 ಸಾವಿರ ಸರ್ಜಿಕಲ್ ಮಾಸ್ಕ್, 2300 ಲೀ. ಸ್ಯಾನಿಟೈಸರ್, 52500 ಕೈಗವಸುಗಳು ಮತ್ತು 15 ಸಾವಿರ ಕೆ.ಜಿ.ಬ್ಲೀಚಿಂಗ್ ಪೌಡರ್ ಸೇರಿದಂತೆ ಹಲವು ಸುರಕ್ಷಾ ಸಾಧನಗನ್ನು ಬ್ಯಾಂಕ್ ಕೊಡುಗೆಯಾಗಿ ನೀಡಿದೆ.

ಮಾರಕ ಸಾಂಕ್ರಾಮಿಕ ರೋಗದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರಿಗೆ ಸುರಕ್ಷಾ ಸಾಧನಗಳನ್ನು ಕೊಡುಗೆಯಾಗಿ ನೀಡುವ ದೇಶವ್ಯಾಪಿ ಆಂದೋಲನದ ಅಂಗವಾಗಿ ಇವುಗಳನ್ನು ಪೂರೈಸಲಾಗಿದೆ ಎಂದು ಐಸಿಐಸಿಐ ಬ್ಯಾಂಕಿನ ಸರಕಾರಿ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥ ಸೌರಭ್ ಸಿಂಗ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News