ಲಾಕ್‌ಡೌನ್ ಹಿನ್ನೆಲೆ : ವಿಶೇಷ ರೈಲುಗಳ ಸಂಚಾರ

Update: 2020-05-13 16:38 GMT

ಮಂಗಳೂರು, ಮೇ 13: ಕೊರೋನ ಲಾಕ್‌ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಇದೀಗ ವಿಶೇಷ ರೈಲು ಸಂಚಾರಕ್ಕೆ ನಿರ್ಧರಿಸಲಾಗಿದ್ದು, ಈ ಸಂದರ್ಭದಲ್ಲಿ ಪ್ರಯಾಣಿಕರು ಕೂಡಾ ಹಲವಾರು ನಿಯಮಗಳು ಹಾಗೂ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ರೈಲ್ವೇ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಈ ಕಡ್ಡಾಯ ನಿಯಮಗಳನ್ನು ಪ್ರಯಾಣಿಕರು ಪಾಲಿಸತಕ್ಕದ್ದು

ಟಿಕೆಟ್ ಖಚಿತಗೊಂಡ ಪ್ರಯಾಣಿಕರು ಮಾತ್ರವೇ ರೈಲ್ವೇ ನಿಲ್ದಾಣಕ್ಕೆ ಪ್ರವೇಶಿಲು ಅನುಮತಿ ಮತ್ತು ರೈಲು ಹತ್ತಲು ಅವಕಾಶ.
* ಪ್ರಯಾಣಿಕರು ಮಾಸ್ಕ್ ಧರಿಸಿರಬೇಕು. ಪ್ರಯಾಣದುದ್ದಕ್ಕೂ ಮಾಸ್ಕ್ ಹೊಂದಿರಬೇಕು.
* ಸೋಂಕು ಲಕ್ಷಣ ರಹಿತ ಪ್ರಯಾಣಿಕರಿಗೆ ಮಾತ್ರವೇ ಸಂಚಾರಕ್ಕೆ ಅವಕಾಶ.
* ರೈಲು ಹೊರಡುವ ಕನಿಷ್ಟ 90 ನಿಮಿಷಗಳ ಮುಂಚಿತವಾಗಿ ಪ್ರಯಾಣಿಕರು ರೈಲು ನಿಲ್ದಾಣ ತಲುಪಿರಬೇಕು.
* ರೈಲ್ವೇ ನಿಲ್ದಾಣದಲ್ಲಿ ಮತ್ತು ರೈಲು ಹತ್ತುವ ಸಂದರ್ಭ ಪ್ರಯಾಣಿಕರು ಸುರಕ್ಷಿ ಅಂತರವನ್ನು ಅನುಸರಿಸಬೇಕು.
* ಪ್ರಾಧಿಕಾರ ಮತ್ತು ಆರೋಗ್ಯ ಸಿಬ್ಬಂದಿ ನೀಡುವ ಸುರಕ್ಷಾ ಕ್ರಮಗಳನ್ನು ಪ್ರಯಾಣಿಕರು ಅನುಸರಿಸಬೇಕು.
* ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಇನ್‌ಸ್ಟಾಲ್ ಮಾಡಿರಬೇಕು.

ಲಭ್ಯವಿರುವ ಸೇವೆಗಳು

* ನಿಲ್ದಾಣದ ಕಟ್ಟಡದ ಸುತ್ತಮುತ್ತ ಅಥವಾ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ಪಾರ್ಕ್ ಮಾಡಲು ಅವಕಾಶವಿಲ್ಲ.
* ಪ್ರಯಾಣದ ಸಂದರ್ಭ ಹೊದಿಕೆಗಳನ್ನು ಪೂರೈಸಲಾಗುವುದಿಲ್ಲ.
* ಬೇಡಿಕೆಯ ಮೇರೆಗೆ ಪಾವತಿಯ ಆಧಾರದಲ್ಲಿ ರೈಲಿನ ಒಳಗಡೆ ಪ್ಯಾಕ್ ಮಾಡಲಾದ ಆಹಾರ ಮಾತ್ರವೇ ಹೊರತು ಕ್ಯಾಟರಿಂಗ್ ವ್ಯವಸ್ಥೆ ಇರುವುದಿಲ್ಲ.

ಟಿಕೆಟ್ ಬುಕ್ಕಿಂಗ್ 

ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಇ ಟಿಕೆಟ್‌ಗಳನ್ನು ಮಾತ್ರವೇ ಬುಕ್ ಮಾಡಬಹುದು.
* ಏಜೆಂಟರ ಮೂಲಕ ಬುಕ್ಕಿಂಗೆ ಅವಕಾಶವಿಲ್ಲ.
* ಮೀಸಲೇತರ (ಅನ್‌ರಿಸವ್ಡ್‌ರ್) ಟಿಕೆಟ್‌ಗಳು ಲಭ್ಯವಿರುವುದಿಲ್ಲ.
* 7 ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ.
* ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳು ಲಭ್ಯವಿರುವುದಿಲ್ಲ.
ಪ್ರಯಾಣಿಕರಿಗೆ ಪ್ರಯಾಣ ಸೂಚನೆ
* ಪ್ರಯಾಣಿಕರು ಹ್ಯಾಂಡ್ ಸ್ಯಾನಿಟೈಸರ್ ‌ಮತ್ತು ಮಾಸ್ಕ್ ಹೊಂದಿರಬೇಕು.
* ಪ್ರಯಾಣದುದ್ದಕ್ಕೂ ಮಾಸ್ಕ್ ಧರಿಸಬೇಕು.
* ಪ್ರಯಾಣಿಕರು ಅನಗ್ಯವಾಗಿ ಬೋಗಿಗಳಲ್ಲಿ ಓಡಾಡುವಂತಿಲ್ಲ.
* ನಿರಂತರವಾಗಿ ಕೈಗಳನ್ನು ಸ್ಯಾನಿಟೈಸರ್ ಮೂಲಕ ಶುಚಿಗೊಳಿಸುತ್ತಿರಬೇಕು ಮತ್ತು ಅನಗತ್ಯವಾಗಿ ಬಾಗಿಲ ಹ್ಯಾಂಡಲ್‌ಗಳನ್ನು ಮುಟ್ಟುವುದನ್ನು ಮಾಡಬಾರದು.
* ಬೋಗಿಗಳೊಳಗೆ ಕಸ ಹಾಕಬಾರದು ಮತ್ತು ಸ್ವಚ್ಛತೆಯನ್ನು ಕಾಪಾಡಲು ರೈಲ್ವೇಗೆ ಸಹಕರಿಸಬೇಕು.
*ಪ್ರಯಾಣಿಕರು ಬಾಗಿಲು, ಕಿಟಕಿ ಮೊಲಾದ ಕಡೆಗಳಿಂದ ಉಗುಳಬಾರದು.
* ಬಾಗಿಲು ಬಳಿ ನಿಂತು ಪ್ರಯಾಣಿಕರು ಪ್ರಯಾಣಿಸಬಾರದು.
* ಶೌಚಾಲಯವನ್ನು ಶುಚಿಯಾಗಿಡಲು ಪ್ರಯಾಣಿಕರು ಸಹಕರಿಸಬೇಕು. ಬಳಸಿದ ಬಳಿಕ ಸ್ವಚ್ಛಗೊಳಿಸಬೇಕು.
* ರೈಲಿನೊಳಗಡೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು.
* ಮುಂಜಾಗೃತಾ ಕ್ರಮವಾಗಿ ರಾಜ್ಯ ಸರಕಾರದಿಂದ ನೀಡಲಾದ ಆರೋಗ್ಯ ಸಲಹೆಗಳನ್ನು ಅನುಸರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News