ಖಾಯಂ ಆಗಿ ಮನೆಯಿಂದಲೇ ಕೆಲಸ ಮಾಡಲು ಸಿಬ್ಬಂದಿಗೆ ಅನುಮತಿ: ಟ್ವಿಟರ್

Update: 2020-05-13 17:51 GMT

ನ್ಯೂಯಾರ್ಕ್, ಮೇ 13: ಸಾಮಾಜಿಕ ಜಾಲತಾಣ ಟ್ವಿಟರ್‌ನ ಕಚೇರಿಗಳು ಸೆಪ್ಟಂಬರ್‌ಗಿಂತ ಮೊದಲು ತೆರೆಯುವ ಸಾಧ್ಯತೆಯಿಲ್ಲ ಎಂದು ಕಂಪೆನಿ ಮಂಗಳವಾರ ಹೇಳಿದೆ ಹಾಗೂ ಕೊರೋನ ವೈರಸ್ ಬೀಗ ಮುದ್ರೆ ಕೊನೆಗೊಂಡ ಬಳಿಕವೂ ತನ್ನ ಹೆಚ್ಚಿನ ಉದ್ಯೋಗಿಗಳಿಗೆ ಖಾಯಂ ಆಗಿ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಅದು ತಿಳಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಉದ್ಯೋಗಿಗಳಿಗೆ ಮಾರ್ಚ್‌ನಲ್ಲಿ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಿದ ಮೊದಲ ಕಂಪೆನಿ ನಮ್ಮದಾಗಿದೆ ಎಂದು ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪೆನಿ ಹೇಳಿದೆ. ಉದ್ಯೋಗಿಗಳು ಎಲ್ಲಾ ಕಡೆ ಚದುರಿಹೋಗಿರುವುದನ್ನು ಖಚಿತಪಡಿಸುವುದಕ್ಕಾಗಿ ಮನೆಯಿಂದಲೇ ಕೆಲಸ ಮಾಡುವ ನೀತಿಯನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸುವುದಾಗಿ ಟ್ವಿಟರ್ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News