ಪಂಪ್‌ವೆಲ್ : ಟಿಪ್ಪರ್‌ - ಟೆಂಪೋ ಢಿಕ್ಕಿ; ಚಾಲಕನಿಗೆ ಗಾಯ

Update: 2020-05-14 03:57 GMT

ಮಂಗಳೂರು, ಮೇ 14: ರಾ.ಹೆ.66ರ ಪಂಪ್‌ವೆಲ್ ಬಳಿ ಟಿಪ್ಪರ್‌ಗೆ ಟೆಂಪೋವೊಂದು ಹಿಂದಿನಿಂದ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. 

ಬೈಕಂಪಾಡಿಯಿಂದ ತರಕಾರಿ ಹೇರಿಕೊಂಡು ಕಾಸರಗೋಡು ಕಡೆಗೆ ತೆರಳುತ್ತಿದ್ದ ಟೆಂಪೋ ಬೈಕ್ ಸವಾರನ ಅವಾಂತರದಿಂದಾಗಿ ಎದುರಿನಲ್ಲಿ ಚಲಿಸುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಟೆಂಪೋ ಚಾಲಕನಿಗೆ ಗಾಯವಾಗಿದೆ.

ಲಾಕ್‌ಡೌನ್ ಜಾರಿಯಲ್ಲಿದ್ದ ವೇಳೆ ಅಪಘಾತಗಳ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿತ್ತು. ಅದರಲ್ಲೂ ಹೆದ್ದಾರಿಗಳಲ್ಲಿ ಅಪಘಾತಗಳೇ ಘಟಿಸುತ್ತಿರಲಿಲ್ಲ. ಇದೀಗ ಲಾಕ್‌ಡೌನ್ ಸಡಿಲಿಕೆಯಾಗುತ್ತಲೇ ಜನರ ಮತ್ತು ವಾಹನಗಳ ಓಡಾಟ ಹೆಚ್ಚುತ್ತಿದೆ. 

ಅಪಘಾತದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News