ಹಿರಿಯ ವಿದ್ವಾಂಸ ಅಬೂಬಕರ್ ಹಾಜಿ ನಿಧನ
Update: 2020-05-14 17:45 IST
ಮಂಗಳೂರು, ಮೇ 14: ಹಿರಿಯ ವಿದ್ವಾಂಸ, ಸಮಸ್ತದ ಹಿರಿಯ ಮುಂದಾಳು, ಚೊಕ್ಕಬೆಟ್ಟು ನಿವಾಸಿ ಅಬೂಬಕರ್ ಹಾಜಿ (90) ಗುರುವಾರ ಅಪರಾಹ್ನ ಮಚ್ಚಂಪಾಡಿಯಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ಮೃತರು ಪತ್ನಿ, ಐದು ಮಂದಿ ಪುತ್ರರು ಮತ್ತು ಐದು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೂಲತಃ ಮುಡಿಪು ಸಮೀಪದ ಪಾತೂರಿನವರಾದ ಇವರು ಕನ್ನಂಗಾರು, ತಣ್ಣೀರುಬಾವಿ, ಅಗ್ರಹಾರ ಮತ್ತಿತರ ಕಡೆ ಖತೀಬರಾಗಿ ಕಾರ್ಯ ನಿರ್ವಹಿಸಿದ್ದರು.ಆಧ್ಯಾತ್ಮಿಕ ಚಿಕಿತ್ಸೆಗೆ ಹೆಸರುವಾಸಿಯಾಗಿದ್ದ ಇವರು ಹಿರಿಯ ಸೂಫಿವರ್ಯರಾಗಿದ್ದರು. ತಳಿಪರಂಬಿನಲ್ಲಿರುವ ಖುವ್ವತ್ತುಲ್ ಇಸ್ಲಾಂ ಮದ್ರಸದಲ್ಲಿ ಶಂಸುಲ್ ಉಲಮಾರ ಶಿಷ್ಯರಾಗಿದ್ದರು.