ಸೋಂಕಿನ ಮೂಲ ಹುಡುಕುವಲ್ಲಿ ವಿಫಲ: ಸಿಪಿಎಂ ಆರೋಪ
Update: 2020-05-14 18:29 IST
ಮಂಗಳೂರು, ಮೇ 14: ನಗರದ ಪಡೀಲು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕಂಡು ಬಂದ ಕೊರೋನ ಸೋಂಕು ಜಿಲ್ಲೆ, ಹೊರ ಜಿಲ್ಲೆಗೆ ಹರಡುತ್ತಿ ದ್ದರೂ ಕೂಡ ಇದರ ಮೂಲವನ್ನು ಕಂಡು ಹುಡುಕುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಆಸ್ಪತ್ರೆಯ ವರಿಷ್ಠರನ್ನು ರಕ್ಷಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇದರ ಮೂಲವನ್ನು ಕೇರಳ ರಾಜ್ಯಕ್ಕೆ ಕಟ್ಟುವ ಹುನ್ನಾರ ಕಂಡು ಬರುತ್ತಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆಪಾದಿಸಿದ್ದಾರೆ.
ವ್ಯಾಪಾರಿ ಮನೋಭಾವದ ಆಸ್ಪತ್ರೆಯ ವರಿಷ್ಠರು ತನ್ನ ಜವಾಬ್ದಾರಿಯನ್ನು ಮರೆತಿರುವುದೇ ಇದಕ್ಕೆ ಕಾರಣ. ಈ ಬಗ್ಗೆ ತನಿಖೆ ನಡೆಸಿ, ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿರುವ ಅವರು ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಸುವಲ್ಲಿ ಕೂಡಾ ರಾಜ್ಯ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.