ಆಹಾರದ ಪೊಟ್ಟಣಗಳಿಗಾಗಿ ಹೊಡೆದಾಡಿದ ವಲಸೆ ಕಾರ್ಮಿಕರು: ವಿಡಿಯೋ ವೈರಲ್

Update: 2020-05-14 14:48 GMT

ಪಾಟ್ನಾ: ಆಹಾರದ ಪೊಟ್ಟಣಗಳಿಗಾಗಿ ಕಾರ್ಮಿಕರಿಗಾಗಿರುವ ವಿಶೇಷ ರೈಲಿನಲ್ಲಿ ತೆರಳಲು ಬಂದಿದ್ದ ವಲಸೆ ಕಾರ್ಮಿಕರ ನಡುವೆ ಹೊಡೆದಾಟ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಬಿಹಾರದ ಪಾಟ್ನಾದಿಂದ 300 ಕಿ.ಮೀ. ದೂರದಲ್ಲಿರುವ ಕತಿಹಾರ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಲಾಕ್ ಡೌನ್ ನಡುವೆ ವಿಶೇಷ ರೈಲುಗಳಲ್ಲಿ ವಲಸೆ ಕಾರ್ಮಿಕರಿಗೆ ಪ್ರಯಾಣಿಸಲು ಅವಕಾಶ ನೀಡುವಾಗ ಸುರಕ್ಷಿತ ಅಂತರವನ್ನು ಪಾಲಿಸಲಾಗುತ್ತಿದೆ ಎನ್ನುವ ರೈಲ್ವೆ ಇಲಾಖೆಯ ಪ್ರತಿಪಾದನೆಯ ಬಗ್ಗೆ ಈ ಘಟನೆಯು ಪ್ರಶ್ನೆಗಳನ್ನೆತ್ತಿದೆ.

ದಿಲ್ಲಿಯಿಂದ ಪುರ್ನಿಯಾಗೆ ತೆರಳುತ್ತಿದ್ದ ರೈಲು ಈ ನಿಲ್ದಾಣದಲ್ಲಿ ನಿಂತಿತ್ತು. ಈ ಸಂದರ್ಭ ವ್ಯಕ್ತಿಯೊಬ್ಬರು ಆಹಾರ ವಿತರಿಸಲು ಆಗಮಿಸಿದ್ದು, ಅಲ್ಲಿದ್ದ ಕಾರ್ಮಿಕರು ಆಹಾರದ ಪೊಟ್ಟಣಗಳಿಗಾಗಿ ಜಗಳವಾಡತೊಡಗಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ದೇಶದಲ್ಲಿ ಲಾಕ್ ಡೌನ್ ಸಂದರ್ಭ  ವಲಸೆ ಕಾರ್ಮಿಕರ ಶೋಚನೀಯ ಸ್ಥಿತಿ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News