ಮೆಸ್ಕಾಂಗೆ ವೆಲ್ಫೇರ್ ಪಾರ್ಟಿ ಮನವಿ
Update: 2020-05-14 22:27 IST
ಮಂಗಳೂರು, ಮೇ 14: ಅಧಿಕ ವಿದ್ಯುತ್ ಶುಲ್ಕ ವಸೂಲಿಯನ್ನು ನಿಲ್ಲಿಸಿ ಕೊರೋನ ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ.ಜಿಲ್ಲಾ ಸಮಿತಿಯು ಬುಧವಾರ ದ.ಕ.ಜಿಲ್ಲಾಧಿಕಾರಿ ಹಾಗೂ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭ ಪಾರ್ಟಿಯ ಜಿಲ್ಲಾ ನಾಯಕರಾದ ಮುತ್ತಲಿಬ್, ಸಲಾಂ ಸಿ.ಎಚ್ ಹಾಗೂ ಉಳ್ಳಾಲ ಕಾರ್ಯದರ್ಶಿ ಸೈಪುಲ್ಲಾ, ಸದಸ್ಯ ಪಝಲ್ ಪಿಲಾರ್, ಎಫ್‌ಐಟಿಯು ಜಿಲ್ಲಾಧ್ಯಕ್ಲ ಅಬ್ದುಲ್ ಜಲೀಲ್ ಉಳ್ಳಾಲ, ಕಾರ್ಯದರ್ಶಿ ದಿವಾಕರ ಉಪಸ್ಥಿತರಿದ್ದರು