×
Ad

ಐವರಿ ಟವರ್ ಅಪಾರ್ಟ್ ಮೆಂಟ್ ಮಾಲಕರ ಸಂಘ ವತಿಯಿಂದ ಕೋವಿಡ್ 19 ವಿರುದ್ಧದ ಹೋರಾಟಕ್ಕೆ ದೇಣಿಗೆ

Update: 2020-05-14 23:11 IST

ಮಂಗಳೂರು: ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಸಂಬಂಧಪಟ್ಟಂತೆ ಬಡವರಿಗೆ ಕಿಟ್ ನೀಡುವ ಸಲುವಾಗಿ ಫಳ್ನೀರ್ ನ ಎಸ್.ಎಲ್. ಮಥಾಯಸ್ ರಸ್ತೆಯಲ್ಲಿರುವ 'ಐವರಿ ಟವರ್ ಅಪಾರ್ಟ್ ಮೆಂಟ್' ಮಾಲಕರ ಸಂಘದ  ವತಿಯಿಂದ 1.10 ಲಕ್ಷ ರೂ. ಅನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮೇ 12ರಂದು ಹಸ್ತಾಂತರಿಸಲಾಯಿತು.

ಐವರಿ ಟವರ್ ಅಪಾರ್ಟ್ ಮೆಂಟ್ ಮಾಲಕರ ಸಂಘದ ಅಧ್ಯಕ್ಷ ಅಬ್ಬಾಸ್ ನಾರ್ಶ 1.10 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಲೋಕಸಭಾ ಸದಸ್ಯರಿಗೆ ಹಸ್ತಾಂತರಿಸಿದರು.

ಸಂಘದ ಜೊತೆ ಕಾರ್ಯದರ್ಶಿ ಪಿ.ಐ.ಖಾಲಿದ್ ಇಸ್ಮಾಯೀಲ್, ಜಂಟಿ ಕೋಶಾಧಿಕಾರಿ ಇಫ್ತಿಕಾರ್ ಅಹ್ಮದ್ ಮತ್ತು ಮೊಹ್ತೆಶಾಮ್ ಕಾಂಪ್ಲೆಕ್ಸ್ ಇದರ ಪ್ರಧಾನ ಅರ್ಕಿಟೆಕ್ಟ್ ಧರ್ಮರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News