ಚೀನಾದಲ್ಲಿ ಮತ್ತೆ ಹರಡುತ್ತಿರುವ ಕೊರೋನ ವೈರಸ್

Update: 2020-05-15 18:11 GMT

ಬೀಜಿಂಗ್, ಮೇ 15: ಈಶಾನ್ಯ ಚೀನಾದ ಪ್ರಮುಖ ನಗರ ಶೆನ್ಯಂಗ್‌ನಲ್ಲಿ ಕಳೆದ ಐದು ದಿನಗಳಲ್ಲಿ ಸ್ಥಳೀಯರಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ ಸುಮಾರು 7,500 ಜನರನ್ನು ಪ್ರತ್ಯೇಕಿಸಲಾಗಿದೆ. ತಿಂಗಳುಗಳ ಅವಧಿಯ ಬೀಗಮುದ್ರೆ ಮತ್ತು ಪ್ರಯಾಣ ನಿರ್ಬಂಧಗಳ ಮೂಲಕ ಚೀನಾವು ಸಾಂಕ್ರಾಮಿಕವನ್ನು ಬಹುತೇಕ ತಂದಿದೆ. ಆದರೆ, ಈಶಾನ್ಯ ಪ್ರಾಂತಗಳು ಮತ್ತು ವುಹಾನ್ ನಗರದಲ್ಲಿ ಹೊಸದಾಗಿ ಸೋಂಕು ಪ್ರಕರಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕದ ಎರಡನೇ ಸುತ್ತಿನ ದಾಳಿಯ ಭೀತಿ ಉಂಟಾಗಿದೆ.

75 ಲಕ್ಷ ಜನಸಂಖ್ಯೆಯ ಶೆನ್ಯಂಗ್ ನಗರದಲ್ಲಿ 89 ದಿನಗಳಲ್ಲಿ ಮೊದಲ ಬಾರಿಗೆ ಸೋಮವಾರ ಹಲವು ಸ್ಥಳೀಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಳಿಕ ಗುರುವಾರವೂ ಹಲವು ಸೋಂಕು ಪ್ರಕರಣಗಳು ವರದಿಯಾದವು. ಎಪ್ರಿಲ್ 22ರಿಂದ ನೆರೆಯ ಜಿಲಿನ್ ಪ್ರಾಂತದಿಂದ ಶೆನ್ಯಂಗ್‌ಗೆ ಬಂದಿರುವ ಹಾಗೂ ಅವರ ಸಂಪರ್ಕಕ್ಕೆ ಬಂದಿರುವ ಸುಮಾರು 7,500 ಮಂದಿಯನ್ನು ಈಗ ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News