ಸಾಂಕ್ರಾಮಿಕ ಮುಚ್ಚಿಟ್ಟ ಚೀನಾವನ್ನು ಹೊಣೆಯಾಗಿಸಲು 18 ಅಂಶಗಳ ಯೋಜನೆ: ಅಮೆರಿಕ ಸೆನೆಟರ್ ಘೋಷಣೆ

Update: 2020-05-15 18:13 GMT

ವಾಶಿಂಗ್ಟನ್, ಮೇ 15: ಕೊರೋನ ವೈರಸ್ ಸಾಂಕ್ರಾಮಿಕದ ವಿಷಯದಲ್ಲಿ ಚೀನಾ ಹರಡಿರುವ ಸುಳ್ಳುಗಳು, ಮಾಡಿರುವ ವಂಚನೆ ಮತ್ತು ಮುಚ್ಚಿಹಾಕಲು ಮಾಡಿದ ಪ್ರಯತ್ನಗಳಿಗಾಗಿ ಆ ದೇಶವನ್ನು ಹೊಣೆಯಾಗಿಸಲು ಅಮೆರಿಕದ ಪ್ರಭಾವಿ ಸೆನೆಟರ್ ಒಬ್ಬರು 18-ಅಂಶಗಳ ಯೋಜನೆಯೊಂದನ್ನು ಘೋಷಿಸಿದ್ದಾರೆ. ಇದರಲ್ಲಿ ಭಾರತದ ಜೊತೆಗಿನ ಸೇನಾ ಬಾಂಧವ್ಯವನ್ನು ಹೆಚ್ಚಿಸುವುದೂ ಸೇರಿದೆ.

ಚೀನಾದ ಸುಳ್ಳು ಮತ್ತು ವಂಚನೆಗಳು ಅಂತಿಮವಾಗಿ ಕೋವಿಡ್-19 ಸಾಂಕ್ರಾಮಿಕವು ಜಾಗತಿಕ ಮಟ್ಟದಲ್ಲಿ ಹರಡಲು ಕಾರಣವಾಗಿದೆ ಎಂದು ಗುರುವಾರ ತನ್ನ ಯೋಜನೆಯನ್ನು ಮಂಡಿಸಿದ ಸೆನೆಟರ್ ಥಾಮ್ ಟಿಲಿಸ್ ಆರೋಪಿಸಿದ್ದಾರೆ.

ಚೀನಾದಿಂದ ಉತ್ಪಾದನಾ ಘಟಕಗಳನ್ನು ಹೊರಗೆ ಸಾಗಿಸುವುದು ಹಾಗೂ ಭಾರತ, ವಿಯೆಟ್ನಾಮ್ ಮತ್ತು ತೈವಾನ್ ಜೊತೆಗಿನ ಸೇನಾ ಬಾಂಧವ್ಯಗಳನ್ನು ವೃದ್ಧಿಪಡಿಸುವುದು ಯೋಜನೆಯಲ್ಲಿ ಅಡಕವಾಗಿರುವ ಪ್ರಮುಖ ಸಲಹೆಗಳಾಗಿವೆ.

ಚೀನಾ ಸರಕಾರ ದುರುದ್ದೇಶಪೂರ್ವಕವಾಗಿ ಸಾಂಕ್ರಾಮಿಕವನ್ನು ಮುಚ್ಚಿಟ್ಟಿತು ಹಾಗೂ ಅದು ಜಾಗತಿಕ ಮಟ್ಟದಲ್ಲಿ ಹರಡಲು ಕಾರಣವಾಯಿತು. ಅದು ಈಗ ಅಸಂಖ್ಯಾತ ಅಮೆರಿಕನ್ನರಿಗೆ ಸಂಕಷ್ಟವನ್ನು ತಂದಿದೆ. ಇದೇ ಚೀನಾ ಆಡಳಿತವು ತನ್ನದೇ ಪ್ರಜೆಗಳನ್ನು ಕಾರ್ಮಿಕ ಶಿಬಿರಗಳಲ್ಲಿ ಕೂಡಿ ಹಾಕುತ್ತದೆ, ಅಮೆರಿಕದ ತಂತ್ರಜ್ಞಾನ ಮತ್ತು ಉದ್ಯೋಗಗಳನ್ನು ಕದಿಯುತ್ತದೆ ಹಾಗೂ ನಮ್ಮ ಮಿತ್ರ ದೇಶಗಳ ಸಾರ್ವಭೌಮತೆಗೆ ಬೆದರಿಕೆಯೊಡ್ಡುತ್ತದೆ ಎಂದು ತನ್ನ 18 ಅಂಶಗಳ ಯೋಜನೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News