3 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-05-15 18:23 GMT

ಲಂಡನ್, ಮೇ 15: ಇಡೀ ಜಗತ್ತನ್ನು ಆಕ್ರಮಿಸಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನಿಂದಾಗಿ ಸಂಭವಿಸಿರುವ ಜಾಗತಿಕ ಸಾವಿನ ಸಂಖ್ಯೆ ಶುಕ್ರವಾರ 3 ಲಕ್ಷವನ್ನು ದಾಟಿದೆ ಹಾಗೂ ಒಟ್ಟು 45 ಲಕ್ಷಕ್ಕೂ ಅಧಿಕ ಮಂದಿ ರೋಗದ ಸೋಂಕಿಗೆ ಒಳಗಾಗಿದ್ದಾರೆ.

ಶುಕ್ರವಾರ ಸಂಜೆಯ ವೇಳೆಗೆ ವೈರಸ್‌ನ ದಾಳಿಗೆ 3,04,309 ಮಂದಿ ಬಲಿಯಾಗಿದ್ದಾರೆ ಹಾಗೂ 45,60,457 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 17,23,438 ಮಂದಿ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

ಅಮೆರಿಕ              87,025

ಇಟಲಿ                31,368

ಬ್ರಿಟನ್              33,614

 ಸ್ಪೇನ್             27,459

ಫ್ರಾನ್ಸ್              27,425

ಬೆಲ್ಜಿಯಮ್          8,959

ಜರ್ಮನಿ             7,933

 ಇರಾನ್             6,902

ಬ್ರೆಝಿಲ್             14,058

ನೆದರ್‌ಲ್ಯಾಂಡ್ಸ್     5,643

ಚೀನಾ                4,633

ಟರ್ಕಿ                 4,007

 ಕೆನಡ               5,472

ಸ್ವೀಡನ್             3,646

ಸ್ವಿಟ್ಸರ್‌ಲ್ಯಾಂಡ್    1,874

ಮೆಕ್ಸಿಕೊ             4,477

ಐರ್‌ಲ್ಯಾಂಡ್       1,506

ರಶ್ಯ                 2,418

ಭಾರತ             2,662

ಪಾಕಿಸ್ತಾನ         803

ಸೌದಿ ಅರೇಬಿಯ  292

ಖತರ್              14

ಯುಎಇ            208

ಬಾಂಗ್ಲಾದೇಶ     298

ಅಫ್ಘಾನಿಸ್ತಾನ     153

ಕುವೈತ್           96

ಬಹರೈನ್        10

ಒಮಾನ್         19

ಶ್ರೀಲಂಕಾ        9

ಸಾಂಕ್ರಾಮಿಕದ ಜೊತೆಗೆ ಕಾಡುವ ಮಾನಸಿಕ ಕಾಯಿಲೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಈ ನಡುವೆ, ಸಾಂಕ್ರಾಮಿಕದ ಜೊತೆ ಜೊತೆಗೆ ಜನರನ್ನು ಕಾಡುವ ಮಾನಸಿಕ ಕಾಯಿಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರು ಎಚ್ಚರಿಕೆ ನೀಡಿದ್ದಾರೆ. ಸುತ್ತಲೂ ಸಂಭವಿಸುವ ಸಾವುಗಳು, ಸೋಂಕಿಗೆ ಒಳಗಾಗುವ ಭೀತಿ ಹಾಗೂ ಮನೆಗಳಿಂದ ಹೊರಬರಲಾಗದೆ ಸಮಾಜದ ಸಂಪರ್ಕ ಕಡಿದುಕೊಂಡು ಪ್ರತ್ಯೇಕವಾಗಿ ನಡೆಸುತ್ತಿರುವ ಜೀವನ ಜನರ ಮನಸ್ಸನ್ನು ದುರ್ಬಲಗೊಳಿಸಿ ಅವರನ್ನು ಮಾನಸಿಕ ಕಾಯಿಲೆಯತ್ತ ಕೊಂಡೊಯ್ಯುವ ಎಲ್ಲ ಸಾಧ್ಯತೆಗಳು ಇವೆ ಎಂದು ಪರಿಣತರು ಗುರುವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News