×
Ad

ಉಡುಪಿ: ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಕೆಎಂಸಿಯಲ್ಲಿ ನಿಧನ

Update: 2020-05-16 11:06 IST

ಉಡುಪಿ, ಮೇ 16: ಮಹಾರಾಷ್ಟ್ರದಿಂದ ತನ್ನ ಹುಟ್ಟೂರಾದ ಕುಂದಾಪುರ ತಾಲೂಕಿಗೆ ಮೇ 13ರಂದು ಆಗಮಿಸಿದ ವ್ಯಕ್ತಿಯೊಬ್ಬರು ಬರುತಿದ್ದಂತೆ ಎದೆನೋವಿಗಾಗಿ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ನೋವು ಉಲ್ಬಣಿಸಿದ ಕಾರಣ ಅವರನ್ನು ಮಣಿಪಾಲ ಕೆಎಂಸಿಗೆ ಕರೆದೊಯ್ದರೂ ಅಲ್ಲಿ ಮೇ 14ರ ಬೆಳಗ್ಗೆ ನಿಧನ ಹೊಂದಿದ್ದಾಗಿ ತಿಳಿದುಬಂದಿದೆ.

ಕುಂದಾಪುರ ತಾಲೂಕು ಜಪ್ತಿಯ 54ರ ಹರೆಯದ ಈ ವ್ಯಕ್ತಿಗೆ ರಾತ್ರಿ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದು ಚೇತರಿಸಿಕೊಂಡಿದ್ದರೂ ಮರುದಿನ ಮೃತಪಟ್ಟರೆಂದು ಹೇಳಲಾಗಿದೆ. ಅವರಿಗೆ ಕೊರೋನ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅದರ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಉಡುಪಿ, ಮೇ 16: ಮಹಾರಾಷ್ಟ್ರದಿಂದ ಮೇ 5ರ ಬಳಿಕ ತನ್ನ ಹುಟ್ಟೂರಾದ ಕುಂದಾಪುರ ತಾಲೂಕಿಗೆ ಆಗಮಿಸಿದ ವ್ಯಕ್ತಿಯೊಬ್ಬರು ಅಸ್ವಸ್ಥತೆಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿನಗಳ ಹಿಂದೆ ಮಣಿಪಾಲ ಕೆಎಂಸಿಯಲ್ಲಿ ನಿಧನರಾಗಿದ್ದಾಗಿ ತಿಳಿದುಬಂದಿದೆ.

ಅವರಿಗೆ ಕೊರೋನ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅದರ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News