ಉದ್ಯಮಿ ಹಾಜಿ ಬಿ. ಮುಹಮ್ಮದ್ ಕುಂಞಿ ನಿಧನ
Update: 2020-05-16 14:35 IST
ಮಂಗಳೂರು, ಮೇ 16: ನಗರದ ಅತ್ತಾವರ ಕಾಪ್ರಿಗುಡ್ಡ ನಿವಾಸಿ, ಹೆಸರಾಂತ ಉದ್ಯಮಿ ಹಾಜಿ ಬಿ. ಮುಹಮ್ಮದ್ ಕುಂಞಿ (84) ಶನಿವಾರ ತಡರಾತ್ರಿ ಸುಮಾರು 2:30ಕ್ಕೆ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರದ ರಹ್ಮಾನ್ ಸಾ ಮಿಲ್‌ನ ಮಾಲಕರಾಗಿದ್ದ ಇವರು ಟಿಂಬರ್ ವ್ಯಾಪಾರದ ಮೂಲಕ ಹೆಸರಾಂತ ಉದ್ಯಮಿಯಾಗಿ ಮಂಗಳೂರಿನಾದ್ಯಂತ ಗುರುತಿಸಲ್ಪಟ್ಟಿದ್ದರು. ನಗರದ ಹಂಪನಕಟ್ಟೆಯ ಮಸ್ಜಿದುನ್ನೂರ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.