×
Ad

ಅನಿವಾಸಿ ಕನ್ನಡಿಗರಿಗೆ ಸೂಕ್ತ ಕ್ವಾರಂಟೈನ್ ಒತ್ತಾಯಿಸಿ ಕೆಐಸಿ ಪ್ರತಿನಿಧಿಗಳಿಂದ ದ.ಕ. ಜಿಲ್ಲಾಧಿಕಾರಿ ಭೇಟಿ

Update: 2020-05-16 17:58 IST

ಮಂಗಳೂರು : ತಾಯ್ನಾಡಿಗೆ ವಾಪಾಸಾಗುತ್ತಿರುವ ಅನಿವಾಸಿ ಕನ್ನಡಿಗರಿಗೆ ಕ್ವಾರಂಟೈನ್ ಸೂಕ್ತ ರೀತಿಯಲ್ಲಿ ಒದಗಿಸುವ ಬಗ್ಗೆ ಹಾಗೂ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ (ಕೆಐಸಿ ಕುಂಬ್ರ) ಸಂಸ್ಥೆಯಲ್ಲಿ ಅನಿವಾಸಿ ಕನ್ನಡಿಗರಿಗೆ ಕ್ವಾರಂಟೈನ್ ಒದಗಿಸುವ ಬಗ್ಗೆ ದ.ಕ. ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಅನೀಸ್ ಕೌಸರಿ, ಕೆಐಸಿ ಕೇಂದ್ರ ಸಮಿತಿ ಪ್ರ. ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ, ಅಲ್ ಕೌಸರ್ ಯೂತ್ವಿಂಗ್ ಕೆಐಸಿ ಕುಂಬ್ರ ಇದರ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಆರ್ ಟಿ ಒ ಜಿಲ್ಲಾಧಿಕಾರಿಯವರನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News