×
Ad

ಉಡುಪಿ ಕ್ಷೇತ್ರದ ಸರಕಾರಿ ಕ್ವಾರಂಟೈನ್ ಕೇಂದ್ರದವರಿಗೆ ಪ್ರತಿದಿನ ಊಟದ ವ್ಯವಸ್ಥೆ

Update: 2020-05-16 20:46 IST

ಉಡುಪಿ, ಮೇ 16: ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ವಿದೇಶದಿಂದ ಹಾಗೂ ಹೊರ ರಾಜ್ಯಗಳಿಂದ ಬಂದು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಡುಪಿ ಮತ್ತು ಬ್ರಹ್ಮಾವರದಲ್ಲಿ ಸರಕಾರಿ ಕ್ವಾರಂಟೈನ್‌ನಲ್ಲಿ ಇರುವವರಿಗೆ ಇಂದು ಮಧ್ಯಾಹ್ನದ ಊಟ ವ್ಯವಸ್ಥಿತವಾಗಿ ತಲುಪಿಸಲಾಯಿತು.

ಊರಿನಿಂದ ಉದ್ಯೋಗ ನಿಮಿತ್ತ ಹೊರರಾಜ್ಯ, ದೇಶಗಳಿಗೆ ತೆರಳಿ ಪ್ರಸ್ತುತ ಊರಿಗೆ ಆಗಮಿಸಿ ಕೋವಿಡ್-19 ಸಂಕಷ್ಟದಲ್ಲಿ 15 ದಿನಗಳ ಕಾಲ ಸರಕಾರಿ ಕ್ವಾರಂಟೈನ್‌ನಲ್ಲಿರುವ ಊರಿನ ಬಂಧುಗಳಿಗೆ ಊಟೋಪಚಾರ ಒದಗಿಸುವ ನಿಟ್ಟಿನಲ್ಲಿ ನಿರ್ಣಯಿಸಿರುವಂತೆ ಮುಂದಿನ ದಿನಗಳಲ್ಲಿ ಶುಚಿ ರುಚಿಯ ಊಟ ವನ್ನು ಸಮಯಕ್ಕೆ ಸರಿಯಾಗಿ ವ್ಯವಸ್ಥಿತವಾಗಿ ತಲುಪಿಸುವ ಬಗ್ಗೆ ಚರ್ಚಿಸ ಲಾಯಿತು.

ಈ ಸಂದರ್ಭದಲ್ಲಿ ಶಾಸಕ ಕೆ.ರಘುಪತಿ ಭಟ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ರಾಘವೇಂದ್ರ ಕಿಣಿ, ನಗರಸಭಾ ಸದಸ್ಯ ಗಿರೀಶ್ ಅಂಚನ್, ಮಂಜುನಾಥ ಹೆಬ್ಬಾರ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News