ಕ್ಷೌರಿಕರಿಗೆ ಬಡ್ಡಿ ರಹಿತ 10 ಸಾವಿರ ರೂ. ಸಾಲ: ನವೀನ್ ಚಂದ್ರ ಭಂಡಾರಿ
ಉಡುಪಿ, ಮೇ 16: ಕೊರೋನ ಸಂಕಷ್ಟದ ಸಮಯದಲ್ಲಿ ಕ್ಷೌರಿಕ ವೃತ್ತಿ ಮಾಡುವವರ ಸಂಕಷ್ಟ ಅರಿತು ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ ಹೊಸ ಯೋಜನೆಗಳನ್ನು ಪ್ರಕಟಿಸಿದೆ ಎಂದು ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿಯ ಸೆಲೂನ್ ಸಾಮಾಗ್ರಿ ಮಳಿಗೆಯಲ್ಲಿ ನಿರಂತರವಾಗಿ ವ್ಯವಹರಿಸುತ್ತಿರುವ ಸದಸ್ಯರ ವೈಯಕ್ತಿಕ ಸಾಲದ ಮೂರು ತಿಂಗಳ ಬಡ್ಡಿಯನ್ನು ಮನ್ನಾ ಮಾಡಲಾಗುವುದು. ಎಲ್ಲ ಸದಸ್ಯರುಗಳ ಎಲ್ಲ ರೀತಿಯ ಸಾಲದ ಮರುಪಾವತಿ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗುವುದು ಎಂದರು.
ಲಾಕ್‌ಡೌನ್ ತೆರವಿನ ನಂತರ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಸದಸ್ಯರಿಗೆ 10ಸಾವಿರ ರೂ. ಆರು ತಿಂಗಳ ಬಡ್ಡಿ ರಹಿತ ಸಾಲವನ್ನು ಜಿಲ್ಲೆಯ ಎಲ್ಲ ಕ್ಷೌರಿಕರಿಗೂ ನೀಡಲಾಗುವುದು. ಬಡ್ಡಿ ರಹಿತ ಸಾಲ ಯೋಜನೆಯನ್ನು ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್‌ಗೂ ವಿಸ್ತರಿಸಲಾಗು ವುದು. ಮೇ 18 ರಂದು ಸೆಲೂನ್‌ಗಳು ಪುನಾರಂಭವಾಗುವ ಸಂದರ್ಭದಲ್ಲಿ ಸವಿತಾ ಸಮಾಜದ ಕ್ಷೌರಿಕರಿಗೆ ಅನುಕೂಲವಾಗುವಂತೆ ಸುಮಾರು 800ಕ್ಕೂ ಅಧಿಕ ಸೆಲೂನ್ ಕಿಟ್‌ಗಳನ್ನು ಸುಮಾರು 4ಲಕ್ಷ ರೂ. ವೆಚ್ಚದಲ್ಲಿ ನೀಡಲಾುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಸಿಇಓ ಮಾಲತಿ ಅಶೋಕ್ ಭಂಡಾರಿ, ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಭಾಸ್ಕರ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ, ನಿರ್ದೇಶಕ ವಿಶ್ವನಾಥ ಭಂಡಾರಿ, ಶೇಖರ್ ಸಾಲಿಯಾನ್, ಸತೀಶ್ ಭಂಡಾರಿ ಕಾಪು, ಉಡುಪಿ ತಾಲೂಕು ಅಧ್ಯಕ್ಷ ರಾಜು ಭಂಡಾರಿ ಉಪಸ್ಥಿತರಿದ್ದರು