×
Ad

ದ.ಕ.ಜಿಲ್ಲೆಯ ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತ

Update: 2020-05-16 20:56 IST

ಮಂಗಳೂರು, ಮೇ 16: ಬೈಕಂಪಾಡಿಯ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 17ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.

ಪಣಂಬೂರು/ಹೊಸಬೆಟ್ಟುವಿನ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಮೇ 19ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಬೈಕಂಪಾಡಿ, ಗೋಕುಲನಗರ, ದುರ್ಗಾನಗರ, ಹೊಸಬೆಟ್ಟು, ಕುಳಾಯಿ, ತಾವರೆಕೊಳ, ಮೀನಕಳಿಯ, ಚಿತ್ರಾಪುರ, ಮಾಸ್ಟರ್ ಐಸ್ ಪ್ಲ್ಯಾಂಟ್, ಬೀಚ್ ರೋಡ್, ಹೊನ್ನೆಕಟ್ಟೆ, ಆಚಾರಿ ಕಾಲನಿ, ಕೂರಿಕಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಗೊಳ್ಳಲಿದೆ.

ಕೊಟ್ಟಾರ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಮೇ 19ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಕೂಳೂರು ಜಂಕ್ಷನ್, 4ನೇ ಮೈಲು ಬಂಗ್ರಕೂಳೂರು, ಬಂಗ್ರಕೂಳೂರು ಗೆಸ್ಟ್ ಹೌಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಗೊಳ್ಳಲಿದೆ.

ಗುರುಪುರ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಮೇ 19ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರಗೆ ಗುರುಪುರ ಪೇಟೆ, ಅಲೈಗುಡ್ಡೆ, ಕೊಟ್ಟಾರಿಗುಡ್ಡೆ, ಮಠದ ಗುಡ್ಡೆ, ಮಳಲಿ, ಭವಂತಿಬೆಟ್ಟು, ಸಾನ್‌ಬೆಟ್ಟು, ಮುಲ್ಲಗುಡ್ಡೆ, ನಾಡಾಜೆ, ಚೆನ್ನರಪಾದೆ, ಸಾದೂರು, ಅಡ್ಡೂರು, ತಾರಿಕರಿಯ, ಕಾಂಜಿಲಕೋಡಿ, ವಿಕಾಸ್‌ನಗರ, ಪಡ್ಡಾಯಿಪದವು, ಕಂದಾವರ, ಶಾಂತಿನಗರ, ಅಸ್ರಾರ್‌ನಗರ, ಗಂಜೀಮಠ, ಸುರಲ್ಪಾಡಿ, ಗಾಂಧಿನಗರ, ಕುಕ್ಕಟ್ಟೆ, ನಾರ್ಲಪದವು, ಘಟ್ನಮಜಲು, ಮೊಗರು, ಮಡಪಾಡಿ, ಪೂಪಾಡಿಕಲ್ಲು, ಬಸ್ತಿಗುಡೆ, ಎಡಪದವು ಪೇಟೆ, ಕಣ್ಣುರಿ, ಜಿಜಾರ್, ಉರ್ಕಿ, ದಡ್ಡಿ, ದೂಮಚಡವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಗೊಳ್ಳಲಿದೆ.

ಮೂಡುಬಿದಿರೆಯ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಮೇ 19ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ಗಾಂಧಿನಗರ, ಮಹಾವೀರ ಕಾಲೇಜು, ಒಂಟಿಕಟ್ಟೆ, ಕಡಲಕೆರೆ, ನಾಗರಕಟ್ಟೆ, ಅರಮನೆಬಾಗಿಲು, ಜ್ಯೋತಿನಗರ, ಜೈನ್‌ಪೇಟೆ, ಶೇಡಿಗುರಿ, ಹೊಸಬೆಟ್ಟು, ಪುಚ್ಚೆಮೊಗರು, ಅಲಂಗಾರು, ಕೋಟೆಬಾಗಿಲು, ಪ್ರಾಂತ್ಯ, ಕಲ್ಲಬೆಟ್ಟು, ಗಂಟಾಲ್‌ಕಟ್ಟೆ, ಬಿರಾವು, ತಾಕೊಡೆ, ಮಾರೂರು, ಹೊಸಂಗಡಿ, ಇರುವೈಲು, ಹೊಸ್ಮಾರ್‌ಪದವು, ಕೊನ್ನೆಪದವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News